ಹಾಡಿಗೂ ಸೈ, ನಾಟಕಕ್ಕೂ ಸೈ ನಟಿ, ಗಾಯಕಿ ರಾಣಿ ಸಿ

Upayuktha
0



ಹಾಸನ ತಾಲ್ಲೂಕು ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಣಿ ಸಿ. ಮೇಡಂ ಅವರ ಕಲೆ ಮತ್ತು ಕನ್ನಡ ಸಾಹಿತ್ಯ ಸೇವೆ ಗುರುತಿಸಿ ಹಾಸನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ  75ನೇ ಗಣರಾಜ್ಯೋತ್ಸವ ದಿನಾಚರಣೆ ದಿನದಂದು ಸನ್ಮಾನ ಸನ್ಮಾನಿಸಿದೆ. 



ಮೇಡಂ ರಂಗಭೂಮಿಯಲ್ಲಿ ಹತ್ತಾರು ವರ್ಷಗಳಿಂದ ನಟಿಸುತ್ತಿರುವುದನ್ನು ನಾನು ನೋಡಿದ್ದೇನೆ. ಸ್ವತ: ನನ್ನ ಸ್ವರಚಿತ ಸಾಮಾಜಿಕ ವಿಡಂಬನಾ ನಾಟಕದಲ್ಲಿ ಅಭಿನಯಿಸಿದ್ದಾರೆ ಇವರ ಕಲಾ ಪರಿಚಯ ಮಾಡಲು ಬಯಸಿ ಮಾಹಿತಿ ಕಳಿಸಿ ಎಂದು ಪೋನಾಯಿಸಿದೆ. ಇವರ ತಂದೆ ಚನ್ನಿಗರಾಯಪ್ಪ, ತಾಯಿ ಕಮಲಮ್ಮ. ಸ್ವಂತ ಸ್ಥಳ ಮೈಸೂರು ಜಿಲ್ಲೆಯ ಧರ್ಮಾಪುರ ಗ್ರಾಮ. ಹಾಸನದ ಸೊಸೆ. ಓದಿರುವುದು ಬಿ.ಎ. ಬಿ.ಎಡ್. ಎಂ.ಎ.  ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆಗೆ ಸೇರಿದ್ದು 14-8-1998ರಲ್ಲಿ. ಪೌಢಶಾಲೆಗೆ ಬಡ್ತಿ 23-7-2023. ಇವರ  ಹವ್ಯಾಸಗಳು ಹಾಡು, ಅಭಿನಯ, ಬರವಣಿಗೆ, ಓದು, ಪರಿಸರ ಪೂರಕ ಕೆಲಸ, ನೃತ್ಯ ಪ್ರಕಾರಗಳ ಕಲಿಕೆ. ಚಿಕ್ಕಂದಿನಿಂದಲೇ ಹಾಡು ಹಸೆ ಸಂಪ್ರದಾಯ ಬಗ್ಗೆ ಆಸಕ್ತಿ. ಕಲಾಕ್ಷೇತ್ರದಲ್ಲಿ ಒಲವು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಸಮಯದ ತೊಡಗಿಸಿಕೊಳ್ಳುವಿಕೆ. ಪರಿಸರ ಸ್ವಚ್ಛತೆ ಇವರ ಇಷ್ಟದ ಆಯ್ಕೆ. ರಸ್ತೆ ದೇವಾಲಯ, ಕಲ್ಯಾಣಿಗಳ ಸ್ವಚ್ಛತೆಗಳಲ್ಲಿ ಪಾಲ್ಗೊಳ್ಳುವಿಕೆ. ಜಲ ಸಂರಕ್ಷಣೆಯ ಬಗ್ಗೆ ಸುತ್ತಲಿನವರಿಗೂ ಜಾಗೃತಿ ಮೂಡಿಸುವಲ್ಲಿ ಗಮನ,  ಆರೋಗ್ಯಕ್ಕಾಗಿ ಯೋಗ.



9 ವರ್ಷಗಳಿಂದ ಹಾಸನಾಂಬ ದೇವಾಲಯದಲ್ಲಿ ಸೇವಾಕಾರ್ಯದಲ್ಲಿ ಭಾಗಿ. ಇವರ ಮಹಿಳಾ ತಂಡ ಭಜನೆ, ಜಾನಪದ ನೃತ್ಯ, ಕೋಲಾಟ, ಕಂಸಾಳೆ, ರೂಪಕ, ನಾಟಕ ಇವುಗಳನ್ನು ಕಲಿತು ಪ್ರದರ್ಶಿಸುತ್ತಾ ಬಂದಿವೆ.  ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಗೊಳಿಸಿ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳನ್ನು ಮೆರೆಸಿದ್ದಾರೆ. ಹಾಸನ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೋಮನಹಳ್ಳಿ ಸಮೀಪದ ಯಲಗುಂದ ಗ್ರಾಮದಲ್ಲಿ ನಡೆದಾಗ ಇವರ ಶಾಲೆಯ ಮಕ್ಕಳು ಕೋಲಾಟ, ನೃತ್ಯ ಪ್ರದರ್ಶನ ನೀಡಿದ್ದನ್ನು ಸ್ವತ: ಸಮ್ಮೇಳನಾಧ್ಯಕ್ಷನಾಗಿ ನಾನು ವೀಕ್ಷಿಸಿದ್ದೇನೆ. ಇವರು ಅಭಿನಯಿಸಿರುವ ಪಾತ್ರಗಳು ವೈವಿಧ್ಯ. ಇವರು  ದೇವಿ ಮಹಾತ್ಮೆಯಲ್ಲಿ ದೇವಿಯಾಗಿ, ಪ್ರಚಂಡ ರಾವಣದಲ್ಲಿ ಸೀತೆ, ಭಕ್ತ ಪೌಲಸ್ಯ-ನಾರದ, ಶ್ರೀ ರಾಮ ಪಾದುಕ ಪಟ್ಟಾಭಿಷೇಕ-ರಾಮ, ಉಷ ಸ್ವಯಂವರ-ಕೃಷ್ಣ, ಸತ್ಯಭಾಮೆಯ ಮುನಿಸು-ಸತ್ಯಭಾಮೆ, ಕೃಷ್ಣ ಸಂಧಾನ-ರುಕ್ಮಿಣಿ, ಶನಿ ಮಹಾತ್ಮೆ-ಲಕ್ಷ್ಮಿ, ಶಿವ ಜಲಂದರದಲ್ಲಿ ಕೃಷ್ಣ, ಮುದ್ರಿಕಾ ಪ್ರದಾನದಲ್ಲಿ ಸೀತೆ ಹಾಗೂ ಗಂಗೆ ಗೌರಿ ಹೀಗೆ ಪೌರಾಣಿಕ ನಾಟಕಗಳ ಸ್ತ್ರೀ ಪುರುಷ ಪಾತ್ರಗಳನ್ನು  ನಿಭಾಯಿಸಿದ್ದಾರೆ.




 ಐತಿಹಾಸಿಕ ನಾಟಕಗಳು ಭುವನ ಸಾರ್ವಭೌಮ, ಶರ್ಮಿಷ್ಠೆ, ಸಂಗೊಳ್ಳಿ ರಾಯಣ್ಣ, ವಿಷ ಜ್ವಾಲೆ, ಆತ್ಮಾಹುತಿ, ದೀಪದ ದೇವಿ, ಕೆಂಪೇಗೌಡ, ಅಮರಸತಿ ಶಾಂತ¯, ಮುತ್ತಿನ ಮೂಗುತಿ. ಅರಕಲಗೊಡು ಸಮೀಪದ ಶಂಭುನಾಥಪುರದಲ್ಲಿ ಎಸ್.ಎಸ್.ಪುಟ್ಟೇಗೌಡರು ರಚಿಸಿದ ಕನಕದಾಸ ನಾಟಕದಲ್ಲಿ ಇವರ ಅಭಿನಯವನ್ನು ನೋಡಿ ಮೆಚ್ಚಿದ್ದೇನೆ. ಸಾಮಾಜಿಕ ನಾಟಕಗಳು ಕಂಬಾಲ ಪಲ್ಲಿ, ಸಂಜೆ ಹಾಡು, ರಾವಿ ನದಿಯ ದಂಡೆಯಲ್ಲಿ, ಹೋಳಿ ಹುಣ್ಣಿಮೆ, ಮಾನಿನಿಯರೇ ಎಚ್ಚರ, ಸಾಯೋ ಆಟ,  ನಿಲುವಂಗಿ ಕನಸು, ಸಂಗ್ಯಾ ಬಾಳ್ಯ, ಜೋಕುಮಾರಸ್ವಾಮಿ, ರಕ್ತ ವರ್ಣೆ ಮತ್ತು  ನಾನು ರಚಿಸಿದ (ಗೊರೂರು ಅನಂತರಾಜು) ನಾರಿ ಹೆಜ್ಜೆ ನರಿ ಕಣ್ಣು, ತೋಳ ಬಂತು ತೋಳ ನಾಟಕಗಳು. ಇವರು ನಟಿಸಿದ ಶಾರ್ಟ್ ಮೂವಿಗಳು ಪತಾಕೆ, ಮಳೆಗಾಗಿ ಹೆಣ ಕಿತ್ತವರು, ತ್ರಿಕಾಲಂ, ಸ್ಟಾರ್‍ಡಂ. ಇವರ ಕಲೆಯನ್ನು ಗುರುತಿಸಿ ಸಂದ ಪ್ರಶಸ್ತಿಗಳು ಶರಣ ವಿಶ್ವವಚನ ಪೌಂಡೇಶನ್- ಬಸವ ಶಿಕ್ಷಕ ಪ್ರಶಸ್ತಿ, ವೀರಭದ್ರೇಶ್ವರ ಕಲಾ ಸಂಘ, ಹಾಸನ- ನಾಟಕ ರತ್ನ ಪ್ರಶಸ್ತಿ, ಜೈ ಕರ್ನಾಟಕ ಯುವ ಮತ್ತು ಜಾನಪದ ಕಲಾಸಂಘ- ಕಲಾ ಪೋಷಕ ರತ್ನ ಪ್ರಶಸ್ತಿ, ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಇವರಿಂದ ಸಾಹಿತ್ಯ ಕ್ಷೇತ್ರಕ್ಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಸದ್ಭಾವನ ಪ್ರಶಸ್ತಿ, ಹಸಿರು ಭೂಮಿ ಪ್ರತಿಷ್ಠಾನ ಚಿಕ್ಕಟ್ಟೆ ಹಬ್ಬ-ಸೇವಾ ರತ್ನ, ಜಿಲ್ಲಾ ಮಹಿಳಾ ಮೋರ್ಚಾ ಮಹಿಳಾ ದಿನಾಚರಣೆಯಂದು ನೀಡಿದ ಜಿಲ್ಲಾ ಸಾಧಕಿ ಪ್ರಶಸ್ತಿ. ಮೇಡಂ ಅಭಿನಯದಷ್ಟೇ ಹಾಡುಗಾರಿಕೆಗೂ ಅಷ್ಟೇ ಶ್ರಮ ವಹಿಸುತ್ತಾರೆ. ಹಾಸನದ ಕಲಾಭವನದಲ್ಲಿ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಕಾವ್ಯ ಕುಂಚ ಗಾಯನ ಕಾರ್ಯಕ್ರಮದಲ್ಲಿ ನಾನು ವಾಚಿಸಿದ ಕಾವ್ಯಕ್ಕೆ ಮೇಡಂ ಸೊಗಸಾಗಿಹಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದು ಮರೆಯುವಂತಿಲ್ಲ.  





-ಗೊರೂರು ಅನಂತರಾಜು, ಹಾಸನ.

9449462879.

ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, 

ಶ್ರೀ ಶನೀಶ್ವರ ದೇವಸ್ಥಾನ  ರಸ್ತೆ, ಹಾಸನ-573201. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top