ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಶೈಕ್ಷಣಿಕ ಕಾರ್ಯಕ್ರಮವು ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಕುಕ್ಕೇಡಿ ಬುಳೆಕ್ಕಾರ ಇಲ್ಲಿ ಫೆ.10ರಂದು ನಡೆಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸ. ಪ್ರ.ದ. ಕಾಲೇಜು ಶೃಂಗೇರಿಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ರವಿಶಂಕರ್ ಬಿ ಮತ್ತು ಸ. ಪ್ರ ದ ಕಾ ಪುಂಜಾಲಕಟ್ಟೆಯ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಶೈಲೇಶ್ ಕುಮಾರ್ ಡಿ ಹೆಚ್ ಆಗಮಿಸಿದ್ದರು. ಅತಿಥಿಯಾಗಿ ರಾಜೇಶ್ ದೈಹಿಕ ಶಿಕ್ಷಕರು ಕೆಪಿಎಸ್ ಪುಂಜಾಲಕಟ್ಟೆ ಇವರು ಸಹಕರಿಸಿದರು.
ಶಾರೀರಿಕ ಶಿಕ್ಷಣವನ್ನು ತಿಳಿಸುವ ಚಟುವಟಿಕೆಗಳು ಮತ್ತು ಸ್ವ ಅರಿವನ್ನು ಮೂಡಿಸುವ ಮಾತ್ರವಲ್ಲದೆ ದೇಹ ಮತ್ತು ಮನಸ್ಸಿನ ಸಾಮಾಸ್ಯವನ್ನು ತಿಳಿದುಕೊಳ್ಳುವಂತಹ ದೈಹಿಕ ಚಟುವಟಿಕೆಗಳನ್ನು ಮಾಡಿಸಿದರು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳು ಅನಿಸಿಕೆ ಹಾಗೂ ತಾವು ಕಲಿತಿಕೊಂದದ್ದನ್ನು ವ್ಯಕ್ತಪಡಿಸಿದರು.
ರಾ. ಸೇ. ಯೋ. ಯ ಶಿಬಿರಾರ್ಥಿ ಸುಶ್ಮಿತಾ ಸ್ವಾಗತಿಸಿ, ಕವಿತಾ ಧನ್ಯವಾದವಿತ್ತರು, ಕು.ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ