ಸಂಪಾದಕೀಯ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ: ಕೇಂದ್ರವೇಕೆ ಇನ್ನೂ ಸರ್ಜಿಕಲ್‌ ಸ್ಟ್ರೈಕ್ ಮಾಡಿಲ್ಲ...?

Upayuktha
0

ಚಿತ್ರ ಕೃಪೆ: ವಿಸ್ತಾರ ನ್ಯೂಸ್


ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆಯ ವೇಳೆ ಸಾಂವಿಧಾನಿಕ ಶಕ್ತಿಕೇಂದ್ರವಾದ ವಿಧಾನಸೌಧದಲ್ಲೇ ಶತ್ರುರಾಷ್ಟ್ರ ಪಾಕಿಸ್ತಾನದ ಪರವಾಗಿ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ಯಾವ ಪದಗಳಲ್ಲಿ ಖಂಡಿಸಿದರೂ ಕಡಿಮೆಯೇ. ಸಂಸತ್‌ ಭವನದ ಮೇಲೆ ನಡೆದ ಭಯೋತ್ಪಾದಕ ದಾಳಿಗೂ, ವಿಧಾನಸೌಧದ ಪರಿಮಿತಿಯೊಳಗೆ ಪಾಕ್ ಪರ ಘೋಷಣೆ ಕೂಗಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ.


ಹಿಂದೆ ಹಲವಾರು ಬಾರಿ ತನಗೆ ಬೇಡವಾದ ರಾಜ್ಯ ಸರಕಾರಗಳನ್ನು ಬಲಪ್ರಯೋಗದಿಂದ ಕಿತ್ತುಹಾಕಿದ ಕಾಂಗ್ರೆಸ್‌ಗೆ ಈಗ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ 'ಸರ್ಜಿಕಲ್ ಸ್ಟ್ರೈಕ್‌' ಮೂಲಕವೇ ಪಾಠ ಕಲಿಸಬೇಕಿದೆ. ಅಂದರೆ ರಾಜ್ಯ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರುವುದೇ ಸರಿಯಾದ ಮಾರ್ಗ.


ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಲೇ ಬಹುಸಂಖ್ಯಾತ ವಿರೋಧಿ, ಭಾರತ ವಿರೋಧಿ ಮನಸ್ಥಿತಿಯ ಶಕ್ತಿಗಳು ಚಿಗುರಿಕೊಳ್ಳಲಾರಂಭಿಸಿದ್ದು ಸುಳ್ಳಲ್ಲ. ಮೊನ್ನೆಯಷ್ಟೇ ಭಾರತ ವಿರೋಧಿ ನಿತಾಶಾ ಕೌಲ್‌ ಳನ್ನು ಕರೆಸಿ ಸಂವಿಧಾನದ ಬಗ್ಗೆ ಮಾತನಾಡಲು ಆಹ್ವಾನಿಸಿದ್ದ ಕಾಂಗ್ರೆಸ್ ಸರಕಾರದ ಧೋರಣೆ ಏನು ಎಂಬುದಕ್ಕೆ ವಿಧಾನಸೌಧದಲ್ಲೇ ಇಂದು ಮೊಳಗಿದ ಪಾಕ್ ಪರ ಘೋಷಣೆ ಜ್ವಲಂತ ಸಾಕ್ಷಿ.


ಇಂತಹ ದೇಶದ್ರೋಹಿ ಮನಸ್ಥಿತಿಯನ್ನು ಬೆಳೆಯಲು ಬಿಡಬಾರದು. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದನೆಯನ್ನು ಹೇಗೆ ಮಟ್ಟ ಹಾಕಲಾಗಿದೆಯೋ, ಅದೇ ರೀತಿ ಕೇಂದ್ರ ಸರಕಾರ ಈಗ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ಇಂತಹ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ.


ರಾಜ್ಯದ ಪ್ರತಿಪಕ್ಷ ಬಿಜೆಪಿ ಈ ಕೃತ್ಯವನ್ನು ಖಂಡಿಸಿದ್ದರೂ ಯಾವ ತೀವ್ರತೆ ಅದರಲ್ಲಿ ಇರಬೇಕಿತ್ತೋ ಅದು ಕಾಣುತ್ತಿಲ್ಲ. ಹೀಗಿರುವಾಗ ಕೇಂದ್ರ ಸರಕಾರ ಮೀನ-ಮೇಷ ಎಣಿಸದೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂಬುದು ಜಾಗೃತ ಭಾರತೀಯರ ಆಗ್ರಹ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top