ಏನೇ ಆಗಲಿ ಒಂದಿಷ್ಟು ಧೈರ್ಯವಾಗಿ ಪ್ರಶ್ನಿಸುವ ಗುಣ ಜನರಲ್ಲಿ ಜಾಗೃತಿ ಮೂಡುವಂತೆ ಮಾಡಿದೆ.
ಇನ್ಮುಂದೆ ಏನೆಲ್ಲ ಪ್ರಶ್ನೆಗಳು ಬರಬಹುದು?
ಏನ್ರಿ ಇದು ಆರ್ಡಿನರಿ ಕಳಪೆ ಕುಕ್ಕರ್ ಕೊಟ್ಟಿದಿರಾ, ನಾವೇನು ಓಟ್ ಹಾಕ್ಬೇಕಾ ಬೇಡವಾ?
ಒಳ್ಳೆ ಸೀರೆ ಕೊಡಕಾಗಲ್ವಾ? ಇದು ಬೇಲಿ ಕಟ್ಟೋಕು ಆಗಲ್ಲ. ಏನ್ ನಮ್ ಓಟಿಗೆ ಬೆಲೆ ಇಲ್ವಾ?
ಆ ಪಾರ್ಟಿಯವರು ಎರಡು ಸಾವಿರ ಪ್ಲಸ್ ಎರಡು ಪ್ಯಾಕೇಟ್ ಕೊಟ್ಟಿದಾರೆ, ನೀವೇನ್ರಿ ಬರೀ ಸಾವಿರ ರೂಪಾಯಿ ಕೊಡ್ತಾ ಇದೀರಾ? ನಾಚಿಕೆ ಆಗಲ್ವಾ?
(ನ್ಯಾಯ ಬೆಲೆ ಅಂಗಡಿಯಲ್ಲಿ..) ಕೊಡ್ರಿ ಹತ್ ಕೇಜಿ ಅಕ್ಕಿನಾ!! ಅಲ್ಲಿ ಟಿವಿ ಯಲ್ಲಿ, ಬಡ್ಕೋತಿದಾರೆ ಹತ್ ಕೇಜಿ ಕೊಟ್ಟಿದೀವಿ ಅಂತ! ನಿಮಗೇನ್ರಿ ಕೊಡೋದಕ್ಕೆ ರೋಗ? ಕೊಡ್ರಿ ಹತ್ ಕೇಜಿ ಅಕ್ಕಿನಾ
(ಮತ್ತದೆ ನ್ಯಾಯ ಬೆಲೆ ಅಂಗಡಿಯಲ್ಲಿ..) ಇದು ಕೇಂದ್ರ ಸಕಾರದ 5 ಕೆಜಿ. ರಾಜ್ಯ ಸರಕಾರದ ಹತ್ ಕೆಜಿ ಅನ್ನ ಭಾಗ್ಯ ಎಲ್ಲಪ್ಪ?
ಅಪ್ಪಾ ಉಮೇದುವಾರ, ಊರು ತುಂಬ ನಿನ್ನ, ನಿನ್ನ ಪಟಾಲಮ್‌ನ ಸೊಡ್ಡುಗಳನ್ನು ಹಾಕಿ ಪ್ಲಾಸ್ಟಿಕ್ ಬ್ಯಾನರ್ ಕಟ್ಟಿದ್ಯಲ್ಲ, ಪ್ಲಾಸ್ಟಿಕ್ ಕಟೌಟ್ ಹಾಕಿದ್ಯಲ್ಲ, ಅದಕ್ಕೆಲ್ಲ ಪರ್ಮಿಷನ್ ಐತಾ? ಆಮೇಕೆ ಅದು ಪ್ಲಾಸ್ಟಿಕ್ ಕಸ ಆಗಿ ಭೂಮಿ ಸೇರ್ತದಲ್ಲ? ಭೂಮಿ ವಿಸ (ವಿಷ) ಆಗಲ್ವಾ?
ಐದು ವರ್ಸಕ್ಕೊಮ್ಮೆ ಬಂದು ಹಲ್ ಕಿರಿತೀರಲ್ಲ, ಏನ್ ಕಡಿದು ಗುಡ್ಡೆ ಹಾಕಿರಿ? ನಾವೇನು ಕೈ ಮುಗಿದು ಒಳಗೆ ಬನ್ನಿ ಅಂತ ಕರ್ದೀವಾ?
ಇಧಾನ ಸಭೆಲಿ ಅದೇನ್ ಕಚ್ಚಾಡ್ತೀರ್ರೀ? ದೇಶ ಕಟ್ರಿ, ಅದಕ್ಕೆ ಚರ್ಚೆ ಮಾಡ್ರಿ ಅಂದ್ರ, ನೀವು ಮನುಸ್ರು ಅನ್ನೋದನ್ನೇ ಮರ್ತು ಕಿತ್ತಾಡ್ತಿರಲ್ರಿ?
ನಮ್ ಮಕ್ಳು ನಿಮ್ಮ ಕದನ ಕಲಾಪ ನ್ವಾಡಿ ನ್ವಾಡಿ, ಅವರು ಹಾಂಗ ಜಗಳ ಮಾಡಾಕೆ ಹತ್ಯಾರ್ರಿ. ಯತಾ ರಾಜಾ ತತಾ ಪ್ರಜಾ ಅಂತಾರಲ್ರಿ ಹಂಗಾತ್ ನೋಡ್ರಿ! ಸರಿಯೇನ್ರಿ ಯಪ್ಪಾ ಇದು ಸರಿ ಏನ್ರಿ?
ಜನರಲ್ಲಿ ಧೈರ್ಯ ಇನ್ನೂ ಹೆಚ್ಚಾದರೆ... ಇನ್ನೂ ಬೋಲ್ಡ್ ಪ್ರಶ್ನೆಗಳು ಬರಬಹುದು?
-ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ