ನಿಟ್ಟೆ ‘ಸನ್ಮತಿ ಗಾರ್ಡನ್’ ನಲ್ಲಿ ನಡೆದ "ಕಲಾಮಂಥನ್ 3.o" ದೇಶೀಯ ಸಾಂಸ್ಕೃತಿಕ ಕಾರ್ಯಕ್ರಮ

Upayuktha
0


ನಿಟ್ಟೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ನಿಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ 'ಸೃಜನ' ಸಾಂಸ್ಕೃತಿಕ ಕಲಾವೇದಿಕೆಯ ವತಿಯಿಂದ ದೇಶೀಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿಟ್ಟೆ ವಿವಿಯ ಮಾನ್ಯ ಕುಲಾಧಿಪತಿಗಳೂ ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರೂ ಆದ ಶ್ರೀ ಎನ್ ವಿನಯ ಹೆಗ್ಡೆ ಅವರು "ಕಲಾಮಂಥನ್  3.o"  ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. 


ಸಂಸ್ಥೆಯ ಎಂಬಿಎ ವಿದ್ಯಾರ್ಥಿಗಳು 'ಭಾವೈಕ್ಯತೆ, ರಾಷ್ಟ್ರೀಯತೆ, ಭಜನೆ ಹಾಡುಗಳಿಗೆ, ವಿವಿಧ ರಾಜ್ಯಗಳ ನೃತ್ಯಪ್ರಕಾರಗಳನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮವು ನಿಟ್ಟೆಯ ‘ಸನ್ಮತಿ ಗಾರ್ಡನ್’ ನಲ್ಲಿ ಜರಗಿತು. ಸಂಸ್ಥೆಯ ನಿರ್ದೇಶಕರಾದ ಡಾ. ಗುರುರಾಜ್ ಎಚ್ ಕಿದಿಯೂರು, ಪ್ರೊ. ಯೋಗೀಶ್ ಹೆಗ್ಡೆ, ನಿರ್ದೇಶಕರು, ನಿಟ್ಟೆ ಕ್ಯಾಂಪಸ್ ಅಭಿವೃದ್ಧಿ ಮತ್ತು ನಿರ್ವಹಣೆ, ಶ್ರೀ ಅಶೋಕ್ ಅಡ್ಯಂತಾಯ ಉಪಸ್ಥಿತರಿದ್ದು, ಸಂಸ್ಥೆಯ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕರಾದ ಡಾ. ಸುಧೀರ್ ರಾಜ್ ಕೆ ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ಕಾರ್ಯದರ್ಶಿ ದರ್ಶನ್ ಸಮನ್ವಯಗೊಳಿಸಿದರು, ಪ್ರಾಧ್ಯಾಪಕರು, ಸಾರ್ವಜನಿಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಕಾರ್ಯಕ್ರಮವನ್ನು ಶ್ಲಾಘಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top