ಸುರತ್ಕಲ್ : ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ, ಶ್ರಮದ ಸತ್ವವನ್ನು ಅರಿಯುವ ಬಹುದೊಡ್ಡ ಅವಕಾಶ ಲಭ್ಯವಾಗುತ್ತದೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ನುಡಿದರು.
ಅವರು ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಸಸಿಹಿತ್ಲುವಿನಲ್ಲಿ ನಡೆಯುತ್ತಿರುವ ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ರಾಷ್ಟ್ರೀಯ ಸೇವಾ ಯೋಜನೆಯು ಸಾಮರಸ್ಯ ಸಹಬಾಳ್ವೆಯ ಅರಿವನ್ನು ಮೂಡಿಸುತ್ತದೆ ಎಂದರು.
ಮುಖ್ಯ ಅತಿಥಿ ಭಗವತಿ ದೇವಸ್ಥಾನ ಸಸಿಹಿತ್ಲುವಿನ ಅಧ್ಯಕ್ಷ ವಾಮನ ಇಡ್ಯಾರವರು ಸಸಿಹಿತ್ಲು ಪರಿಸರದ ಧಾರ್ಮಿಕ ಹಿನ್ನಲೆ ಮತ್ತು ಜೀವನ ಮೌಲ್ಯಗಳ ಕುರಿತು ತಿಳಿಸಿದರು.
ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ., ಹಳೆ ವಿದ್ಯಾರ್ಥಿ ಸಂಘ, ಸಸಿಹಿತ್ಲುವಿನ ಮಾಜಿ ಅಧ್ಯಕ್ಷ ಎಸ್. ದಯಾನಂದ್ ಮತ್ತು ಯುವಕ ಮಂಡಲ ಸಸಿಹಿತ್ಲುವಿನ ಅಧ್ಯಕ್ಷ ದಿಲೀಪ್ ಕರ್ಕೇರಾ, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ನ ಉಪಾಧ್ಯಕ್ಷ ಯೋಗೀಶ್ ಕುಳಾಯಿ ಶುಭ ಕೋರಿದರು.
2024ರ ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕಾಲೇಜಿನ ರಾ.ಸೇ.ಯೋ. ಘಟಕದ ಕಾರ್ಯದರ್ಶಿ ಹಿತಾ ಉಮೇಶ್ ಪೂರ್ವ ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ., ಸಹ ಶಿಬಿರಾಧಿಕಾರಿಗಳಾದ ಡಾ. ಪ್ರಶಾಂತ್ ಎಂ.ಡಿ ಮತ್ತು ವಿನೋದ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘ, ಸಸಿಹಿತ್ಲುವಿನ ಉಪಾಧ್ಯಕ್ಷ ಸತೀಶ್ ತಿಂಗಳಾಯ ಪ್ರಾಧ್ಯಾಪಕರಾದ ಪ್ರೊ. ವಾಮನ ಕಾಮತ್, ಡಾ. ಸಂತೋಷ್ ಆಳ್ವ ಮತ್ತು ರಾ.ಸೇ.ಯೋ. ಘಟಕದ ಕಾರ್ಯದರ್ಶಿಗಳಾದ ಜಿತಿನ್ ಜೆ. ಶೆಟ್ಟಿ, ಮನೀಷ್ ಡಿ. ಶೆಟ್ಟಿ, ನಿರ್ಮಿಕಾ ಎನ್. ಸುವರ್ಣ ಉಪಸ್ಥಿತರಿದ್ದರು.
ಶಿಬಿರಾಧಿಕಾರಿಗಳಾದ ಅಕ್ಷತಾ ವಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ಭಾಗ್ಯಲಕ್ಷ್ಮಿ ಎಂ., ವಂದಿಸಿದರು. ಶಿಬಿರಾರ್ಥಿ ಸ್ಮಿತಾ ಸಿ. ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







