ಅಯೋಧ್ಯೆ: ಮುಂಬಯಿಯ ಉದ್ಯಮಿ ನಾಗೇಂದ್ರ ಆಚಾರ್ಯ ಶ್ರೀಮತಿ ಅರುಣಾ ಆಚಾರ್ಯ ದಂಪತಿಗಳು ಅಯೋಧ್ಯಾ ರಾಮನಿಗೆ ಬೆಳ್ಳಿಯ ಎರಡು ಬೃಹತ್ ಕಾಲುದೀಪಗಳನ್ನು ಅರ್ಪಿಸಿದ್ದಾರೆ.
ಶ್ರೀ ಪೇಜಾವರ ಶ್ರೀಗಳ ಮೂಲಕ ಅವರು ಅರ್ಪಿಸಿದ ದೀಪಗಳು ತಲಾ ಮೂರುವರೆ ಅಡಿ ಎತ್ತರ ಹಾಗೂ ತಲಾ 13.5 ಕೆಜಿ ತೂಕವಿದೆ.
ಆಚಾರ್ಯ ದಂಪತಿಗಳು ವಿ.ಕೆ.ಆರ್ ಟ್ರಸ್ಟ್ ನ ವಿಶ್ವಸ್ತರೂ ಆಗಿದ್ದು ಉಡುಪಿಯ ಕೃಷ್ಣ ಮಠ, ಅಷ್ಟ ಮಠಗಳ ವಿಶೇಷ ಭಕ್ತರಾಗಿದ್ದು ಅನೇಕ ಸೇವೆಗಳನ್ನು ಸಲ್ಲಿಸಿದ್ದಾರೆ. ಉಡುಪಿ ಮೂಡುಬೆಟ್ಟು ಸಮೀಪವಿರುವ ಎಣ್ಣೆ ಕೃಷ್ಣ ಎಂದೇ ಪ್ರಸಿದ್ಧವಾಗಿರುವ ಕಂಗೂರು ಮಠದ ಜೀರ್ಣೋದ್ಧಾರದಲ್ಲಿ ಮುಂಚೂಣಿಯಲ್ಲಿದ್ದು ಬಹಳ ದೊಡ್ಡ ಮೊತ್ತದ ದೇಣಿಗೆಯನ್ನೂ ನೀಡಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ