ಮಸ್ಕತ್ : ಮಸ್ಕತ್ ನ " ಬಿರುವ ಜವನೆರ್ " ಸಂಘಟನೆ ಯು ಮಸ್ಕತ್ ನ ದಾರಸೈಟ್ ಶ್ರೀ ಕೃಷ್ಣ ದೇವಸ್ಥಾನ ದಲ್ಲಿ ಪೂಜಾ ಸಹಿತ "ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ " ಕಥೆ ಯನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿ ಗೊಳಿಸಲಿದೆ. ಹೊರ ರಾಷ್ಟ್ರದಲ್ಲಿ ಮೊದಲ ಬಾರಿ ಶನೀಶ್ವರ ಯಕ್ಷಗಾನ ಪ್ರದರ್ಶನ ಮಾಡಿದ ಕೀರ್ತಿ ಪಡೆದ ತಂಡ ದಿಂದ ಸತ್ಯನಾರಾಯಣ ಪೂಜಾ ಸಹಿತ ತಾಳಮದ್ದಳೆ ಸಂಪನ್ನಗೊಳ್ಳಲಿದೆ.
ಮಾರ್ಚ್ 1, ಶುಕ್ರವಾರ 8.30 ರಿಂದ ಅಪರಾಹ್ನ 1.30 ರ ತನಕ ಶನೀಶ್ವರ ಪೂಜೆ ಖ್ಯಾತಿಯ ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ, ಮಂಗಳೂರು ತಂಡವು ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಇವರ ಸಂಯೋಜನೆಯಲ್ಲಿ ಪ್ರದರ್ಶನ ನೀಡಲಿದೆ. ಕಳೆದ ಮೂರು ದಶಕಗಳಿಂದ ತಾಳಮದ್ದಳೆ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ತುಳುನಾಡಿನ ಈ ಖ್ಯಾತ ತಂಡವು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯ ಗಲ್ಲಿ ಹಾಗೂ ದುಬೈ, ಅಬುದಾಬಿ, ಮಸ್ಕತ್ ರಾಷ್ಟ್ರ ಗಳಲ್ಲಿ ಪೂಜಾ ಸಹಿತ ಶನೀಶ್ವರ ತಾಳಮದ್ದಳೆ ನಡೆಸಿ ಜನಪ್ರಿಯತೆ ಗಳಿಸಿವೆ.
ಈ ಪೂರ್ವದಲ್ಲಿ " ಬಿರುವ ಜವನೆರ್ " ಇದೇ ತಂಡ ದಿಂದ ಎರಡು ಬಾರಿ ಶನಿ ಪೂಜೆ ಯನ್ನು ಮಸ್ಕತ್ ನಲ್ಲಿ ಆಯೋಜಿಸಿ ಯಶಸ್ವಿ ಆಗಿದ್ದಾರೆ. ಈ ಸಂಘಟನೆಯು ಧಾರ್ಮಿಕ ಮತ್ತು ಸಮಾಜ ಸೇವಾ ಚಟುವಟಿಕೆಯನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಕೋಡಿಕಲ್ ಹಾಗೂ ಅರ್ಥಧಾರಿಗಳಾಗಿ ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಸದಾಶಿವ ಆಳ್ವ ತಲಪಾಡಿ, ಶಶಿಕಾಂತ್ ಶೆಟ್ಟಿ ಕಾರ್ಲ, ಪ್ರಸನ್ನ ಶೆಟ್ಟಿ ಅತ್ತೂರ್ ಗುತ್ತು, ಮನೋಹರ ಕುಂದರ್ ಎರ್ಮಾಳ್, ಪ್ರಜ್ವಲ್ ಶೆಟ್ಟಿ ಗುರುವಾಯನಕೆರೆ, ನಿತಿನ್ ಹುಣಸೆಕಟ್ಟೆ ಭಾಗವಹಿಸಲಿದ್ದಾರೆ. ರವಿ ಭಟ್ ಪಡುಬಿದ್ರಿ ಅವರು ಪೂಜಾ ವ್ಯವಸ್ಥೆ ಯಲ್ಲಿ ಸಹಕರಿಸಲಿದ್ದಾರೆ.
ಪೂಜೆಯ ನಂತರ ಪ್ರಸಾದ ಭೋಜನ ಹಾಗೂ ಸಂಜೆ 5.30 ರ ತನಕ ಕಲ್ಲಡ್ಕ ವಿಠ್ಠಲ ನಾಯ್ಕ್ ಅವರ ತಂಡ ದಿಂದ "ಗೀತಾ ಸಾಹಿತ್ಯ ಸಂಭ್ರಮ " ಜರಗಲಿದೆ. ಮಸ್ಕತ್ ನಲ್ಲಿ ನೆಲೆಸಿರುವ ಎಲ್ಲಾ ಸಮುದಾಯದ ಭಕ್ತ ಭಾಂದವರು ಆಗಮಿಸಿ ಸಹಕರಿಸಬೇಕೆಂದು ಬಿರುವ ಜವನೆರ್ ಸಂಘಟಕರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ