ಮಂಗಳೂರು ವಿವಿ: ಶಿಕ್ಷಕೇತರ ಉದ್ಯೋಗಿಗಳ ಪದೋನ್ನತಿಗೆ ಮನವಿ

Upayuktha
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಕೇತರ ಉದ್ಯೋಗಿಗಳ ಸಂಘ, ಮಂಗಳಗಂಗೋತ್ರಿ ವತಿಯಿಂದ ಇತ್ತೀಚೆಗೆ ಸಂಘದ ಬೇಡಿಕೆಗಳ ಈಡೇರಿಕೆಗಾಗಿ ಗೇಟ್ ಮೀಟಿಂಗ್ ನಡೆಸಲಾಯಿತು. ಮಾನ್ಯ ಸಿಂಡಿಕೇಟ್ ನ ಎಲ್ಲಾ ಸದಸ್ಯರುಗಳಿಗೆ ಸಂಘದ ವತಿಯಿಂದ ಶಿಕ್ಷಕೇತರರ ಪದೋನ್ನತಿಯ ಕುರಿತಂತೆ ಬೆಂಬಲ ನೀಡಲು ಮನವಿ ಸಲ್ಲಿಸಲಾಯಿತು.


ಇದಕ್ಕೆ ಪ್ರತಿಕ್ರಿಸಿದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು, ನೆನೆಗುದಿಗೆ ಬಿದ್ದಿರುವ ಶಿಕ್ಷಕೇತರರ ಪದೋನ್ನತಿಯ ಕುರಿತಂತೆ ಸಿಂಡಿಕೇಟ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷ ಹೆಚ್ ವಿಜಯರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಎಂ.ಬಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸರ್ವ ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top