ಅಯೋಧ್ಯಾ ರಾಮನಿಗೆ ಶ್ರೀ ಕಾಶಿಮಠ ಸಂಸ್ಥಾನದಿಂದ ಮತ್ತೊಂದು ಭರ್ಜರಿ ಕೊಡುಗೆ

Upayuktha
0


ಉಡುಪಿ: ಅಯೋಧ್ಯೆಯ ಬಾಲರಾಮನಿಗೆ ಶ್ರೀ ಕಾಶಿಮಠ ಸಂಸ್ಥಾನದಿಂದ ಸುವರ್ಣ ಅಟ್ಟೆ ಪ್ರಭಾವಳಿ ಸಮರ್ಪಣೆಗೆ ಸಿದ್ಧವಾಗಿದೆ. ಉಡುಪಿ ಜಿಲ್ಲೆ ಕೋಟ ಶ್ರೀ ಕಾಶಿ ಮಠದ ಶಾಖೆಯಿಂದ ವೈಭವದ ಮೆರವಣಿಗೆಯ ಮೂಲಕ ಸ್ವರ್ಣಮಯ ಅಟ್ಟೆ ಪ್ರಭಾವಳಿ ಅಯೋಧ್ಯೆಯತ್ತ ತೆರಳಲಿದೆ.


ಈ ಸ್ವರ್ಣಮಯ ಅಟ್ಟೆಯನ್ನು ಸುಮಾರು ಒಂದು ಕೆಜಿ ಚಿನ್ನ ಮತ್ತು 3 ಕೆಜಿ ಬೆಳ್ಳಿಯಿಂದ ತಯಾರಿಸಲಾಗಿದೆ. ಒಟ್ಟಾರೆ ಸುಮಾರು‌70 ಲಕ್ಷ ರೂ ವೆಚ್ಚ ತಗಲಿದೆ. ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ ನಿರ್ಮಿಸಲಾಗಿದೆ. 

ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಬಾಲರಾಮನಿಗೆ ಇದನ್ನು ಅರ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


ಮೊನ್ನೆಯಷ್ಟೆ ಶ್ರೀರಾಮನ ಉತ್ಸವಕ್ಕೆ ರಜತ ಪಲ್ಲಕ್ಕಿಯನ್ನು ಕಾಶೀಮಠ ಸಂಸ್ಥಾನದಿಂದ ಸಮರ್ಪಿಸಲಾಗಿತ್ತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top