ಕೆಟ್ಟು ನಿಂತ ಬಸ್: ಪ್ರಯಾಣಿಕರಿಗೆ ನೆರವಾದ ಸಂಸದ ಬಿ.ವೈ ರಾಘವೇಂದ್ರ

Upayuktha
0


ಶಿವಮೊಗ್ಗ: ಕೆಟ್ಟು ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದಾಗಿ ತೊಂದರೆಗೊಳಗಾಗಿದ್ದ ಪ್ರಯಾಣಿಕರ‌ನೆರವಿಗೆ, ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಧಾವಿಸಿದ ಘಟನೆ ಭಾನುವಾರ ನಡೆದಿದೆ.


ಬೆಂಗಳೂರಿನಿಂದ ಕುಮಟಾಗೆ ಸಂಚರಿಸುತ್ತಿದ್ದ ಶಿರಸಿ ಉಪ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್, ಶಿವಮೊಗ್ಗದ ತ್ಯಾವರೆಕೊಪ್ಪ ಸಮೀಪ ಕೆಟ್ಟು ರಸ್ತೆಯಲ್ಲಿ ನಿಂತಿತ್ತು. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.


ಇದೇ ವೇಳೆ ಶಿವಮೊಗ್ಗದಿಂದ ಸಾಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು, ಸರ್ಕಾರಿ ಬಸ್ ನಿಂತುಕೊಂಡಿದ್ದನ್ನು ಗಮನಿಸಿ ಕಾರಿನಿಂದ ಇಳಿದು ಬಸ್ ಚಾಲಕ, ನಿರ್ವಾಹಕರ ಬಳಿ ಕಾರಣ ಕೇಳಿದ್ದಾರೆ.


ಬಸ್ ಕೆಟ್ಟ ಮಾಹಿತಿ ಅರಿತ ಸಂಸದರು, ಮೊಬೈಲ್ ಮೂಲಕ ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ (ಡಿಸಿ) ಅಧಿಕಾರಿ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿ ಕೂಡಲೆ  ಬಸ್ ದುರಸ್ತಿಗೆ ಕ್ರಮಕೈಗೊಂಡು ಪ್ರಯಾಣಿಕರಿಗೆ ನೆರವಾಗುವಂತೆ ಸೂಚಿಸಿದರು.


ಅದರಂತೆ ಕೆ.ಎಸ್.ಆರ್.ಟಿ.ಸಿ ಡಿಸಿ ವಿಜಯ್ ಕುಮಾರ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಬಸ್ ದುರಸ್ತಿಗೊಳಿಸುವಲ್ಲಿ ಸಹಕರಿಸಿದರು. ತದನಂತರ ಬಸ್ ಕುಮಟಾದತ್ತ ಪ್ರಯಾಣ ಬೆಳೆಸಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top