ನಮ್ಮಲ್ಲಿ ಚಿಕ್ಕ ಮಕ್ಕಳನ್ನು ಬಾಲವಾಡಿ ತರಗತಿಗಳಿಗೆ ಕರೆದು ಕೊಂಡು ಹೇೂಗಿ ಕೂರಿಸುವುದು ತುಂಬಾ ಕಷ್ಟ. ಮೊದ ಮೊದಲು ನಮ್ಮ ಕಂದಮ್ಮಗಳು ತುಂಬಾ ಅಳುತ್ತಾವೆ. ಯಾಕೆಂದರೆ ಮನೆಯ ಪರಿಸರವೇ ಬೇರೆ, ಶಾಲೆಯ ವಾತಾವರಣವೇ ಬೇರೆ, ಅಲ್ಲಿ ಮಗುವಿಗೆ ಎಲ್ಲವೂ ಹೊಸತೆ ಟೀಚರ್ ನೇೂಡುವಾಗಲೇ ಹೆದರಿಕೆ ಎಲ್ಲಾ ಮಕ್ಕಳ ಮುಖದಲ್ಲಿ ಒಂದು ರೀತಿಯಲ್ಲಿ ಹೆದರಿಕೆಯ ಮುಖ ಭಾವ ಪರಿಚಯವೂ ಇಲ್ಲ. ಹಾಗಾಗಿ ಇಂತಹ ಚಿಕ್ಕ ಮಕ್ಕಳನ್ನು ಸಮಾಧಾನ ಪಡಿಸಿ ಕ್ಲಾಸಿಗೆ ಬರುವಂತೆ ಮಾಡುವುದೇ ಹೆತ್ತವರಿಗೂ ಶಿಕ್ಷಕರಿಗೂ ಒಂದು ಸವಾಲು.
ಕ್ರಮೇಣ ಈ ಮಕ್ಕಳು ಶಾಲೆಯ ಪರಿಸರಕ್ಕೆ ಒಗ್ಗಿದ ಮೇಲೆ ಆ ಮಕ್ಕಳೇ ಅತ್ಯಂತ ಖುಷಿ ಖುಷಿಯಿಂದ ಶಾಲೆಗೆ ಓಡಿ ಓಡಿ ಬರುತ್ತಾವೆ. ಇದಕ್ಕಾಗಿಯೇ ಶಾಲೆಯಲ್ಲಿ ಟೀಚರ್ ಇಂತಹ ಮಕ್ಕಳಿಗೆಯೇ ಚಾಕೊಲೇಟ್ , ಆಟಿಕೆ, ಕಥೆ ಹಾಡು ಹೇಳಿ ಡ್ಯಾನ್ಸ್ ಮಾಡಿಸುವುದು. ಈ ಬಾಲವಾಡಿ ಶಾಲಾ ಮಕ್ಕಳ ಶಾಲಾ ಜೀವನ ಈಗ ಯಾಕೆ ನನಗೆ ನೆನಪಾಯಿತು ಕೇಳಿದರೆ ಅದಕ್ಕೂ ಒಂದು ಬಲವಾದ ಕಾರಣವೂ ಇದೆ.
ಇಂದು ನಮ್ಮ ಶಾಸನ ಸಭೆಯ ಹೆಡ್ ಮಾಸ್ಟರ್ ಖಾದರ್ ಮೇಷ್ಟ್ರು ತಮ್ಮ ಶಾಸನ ಸಭೆ ಎಂಬ ಶಾಲೆಗೆ ಮಕ್ಕಳನ್ನು ಬರುವಂತೆ ಮಾಡಲು ಕೆಲವೊಂದು ಸಿಹಿ ವಿಚಾರಗಳನ್ನು ತಮ್ಮಮಕ್ಕಳಿಗೆ ಹಂಚಲು ಮುಂದಾಗಿದ್ದಾರೆ ಅನ್ನುವುದನ್ನು ಇಂದಿನ ಪತ್ರಿಕೆಗಳಲ್ಲಿ ಓದಿದ ತಕ್ಷಣವೇ ನನಗೆ ನೆನಪಾಗಿದ್ದು ನಮ್ಮ ಅಂಗನವಾಡಿ ಶಾಲಾ ಮಕ್ಕಳ ಕಥೆ.
ಶಾಸನ ಸಭೆಗೆ ಸಮಯಕ್ಕೆ ಸರಿಯಾಗಿ ಬರುವವರಿಗೆ ಬಹುಮಾನ ನೀಡುವುದು, ಸದನದ ಕಲಾಪದಲ್ಲಿ ಉತ್ಸಾಹದಿಂದ ಭಾಗವಹಿಸಲು ದಿನಕ್ಕೊಂದು ಸಿಹಿ ತಿಂಡಿ ನೀಡುವುದು. ಇದನ್ನೆಲ್ಲಾ ನೇೂಡುವಾಗಲೇ ನಮ್ಮಗೆ ನೆನಪಾಗಲೇ ಬೇಕು ನಮ್ಮ ಅಂಗನವಾಡಿ ಮಕ್ಕಳ ಪರಿಸ್ಥಿತಿ..!
ಇಂತಹ ಪರಿಸ್ಥಿತಿ ನಮ್ಮ ಸಂಸದೀಯ ವ್ಯವಸ್ಥೆಗೆ ಬರ ಬೇಕೇ? ನಮ್ಮೆಲ್ಲರ ಶಾಸಕರುಗಳಿಗೆ ಸರ್ಕಾರದ ಖಚಿ೯ನಿಂದಲೇ ಎಷ್ಟೊಂದು ಹಣ ವ್ಯಯ ಮಾಡುತ್ತೇವೆ. ತಿಂಗಳಿಗೆ ಕೈ ತುಂಬ ಸಂಬಳ. ಕೂತದಕ್ಕೂ, ನಿಂತದಕ್ಕೂ, ತಿರುಗಿದಕ್ಕೂ ಭತ್ಯೆ. ಒಂದೇ ಎರಡೇ ತಿಂಗಳಿಗೆ ಲಕ್ಷ ಗಟ್ಟಲೆ. ಸದನದಲ್ಲಿ ಒಂದು ದಿನ ಕೂತು ನಿವೃತ್ತಿಯಾದರೂ ತಿಂಗಳಿಗೆ ಐವತ್ತು ಸಾವಿರ ಪಿಂಚಣಿ . ಇಷ್ಟೆಲ್ಲಾ ಕೊಟ್ಟ ಮೇಲು ಅವರ ಕುರಿತಾಗಿ ಮಾತನಾಡುವ ಹಾಗಿಲ್ಲ. ಹಕ್ಕು ಚ್ಯುತಿ ಪ್ರಶ್ನೆ ..ಇದು ನಮ್ಮ ಪ್ರಜಾಪ್ರಭುತ್ವ ಅಲ್ವೇ?
ಹಾಗಾದರೆ ಈ ನಮ್ಮ ಪ್ರಜಾಪ್ರಭುತ್ವ ಅಥಾ೯ತ್ ಮಜಾ ಪ್ರಭುತ್ವ ಈ ಮಟ್ಟಕ್ಕೆ ಇಳಿಯಲು ಕಾರಣ ಯಾರು ಅನ್ನುವ ಪ್ರಶ್ನೆ ಕಾಡುವುದು ಸಹಜ ತಾನೇ. ಒಟ್ಟಿನಲ್ಲಿ ಈ ದೇಶದ ಪ್ರಬುದ್ಧ ಪ್ರಜೆಗಳು ಅನ್ನಿಸಿಕೊಂಡ ನಾವೇ ಕಾರಣ ಅನ್ನುವುದನ್ನು ನಾವು ಮನಸಾರೆ ಒಪ್ಪಿಕೊಳ್ಳಲೇಬೇಕಾಗಿದೆ. ಚುನಾವಣೆ ಕಾಲದಲ್ಲಿ ಅಭ್ಯರ್ಥಿಗಳ ಪ್ರತಿಭೆ ಸಾಮಥ್ಯ೯ ಪ್ರಾಮಾಣಿಕತೆ ದಕ್ಷತೆ ನಮಗೆ ಬೇಡವೇ ಬೇಡ. ನಮ್ಮ ಆಯ್ಕೆಯ ಮಾನದಂಡವೇ ಬೇರೆ. ಹಾಗಾಗಿ ಇಂತಹ ಜನಪ್ರತಿನಿಧಿಗಳಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ? ಹಾಗಾಗಿ ಚಾಕೊಲೇಟ್ ಕೊಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸ ಬೇಕಾದ ಪರಿಸ್ಥಿತಿ ನಮದಾಗಿದೆ ಅಷ್ಟೇ?
- ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ,
ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ