ಯೋಗದ ಸೇವೆಗೆ- ಏಕನಾಥ ಬಾಳಿಗ ಹಾಗೂ ಕುಶಾಲಪ್ಪಗೌಡ

Upayuktha
0

ದೇಲಂಪಾಡಿ ಪ್ರತಿಷ್ಠಾನದ ಹಾಗೂ ರಾಮಕೃಷ್ಣಮಠ ಮಂಗಳೂರು ಇವರ ವತಿಯಿಂದ ಸನ್ಮಾನ



ಮಂಗಳೂರು: ರಾಮಕೃಷ್ಣಮಠ ಹಾಗೂ ದೇಲಂಪಾಡಿ ಪ್ರತಿಷ್ಠಾನ ಮಂಗಳೂರು ಇವರ ವತಿಯಿಂದ ರಾಮಕೃಷ್ಣಮಠದಲ್ಲಿ ಇತ್ತೀಚೆಗೆ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಯೋಗತರಬೇತಿಯ ಸಮಾರೋಪ ಸಮಾರಂಭ ನಡೆಯಿತು. 


ಆಶ್ರಮದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜೀ ಮಹಾರಾಜ್ ದೀಪಬೆಳಗಿಸಿ ಆಶೀರ್ವಚನ ನೀಡಿ ಶಿಬಿರಾರ್ಥಿಗಳಿಗೆ ಯೋಗತರಬೇತಿಯ ಪ್ರಯೋಜನೆ ಪಡೆದುಕೊಂಡದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 


ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಪೊರೇಷನ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕರಾದ ಏಕನಾಥ ಬಾಳಿಗ ಜನರು ಎಳವೆಯಿಂದಲೇ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಯೋಗಜನರ ನಿತ್ಯಜೀವನದ ಭಾಗವಾಗ ಬೇಕೆಂದು ಅಭಿಪ್ರಾಯಪಟ್ಟರು. ಅಲ್ಲದೆ ಕಲಿತುಕೊಂಡು ಯೋಗಾಸನದಿಂದ ಒದಗುವ ಪ್ರಯೋಜನಗಳನ್ನು ವಿವರಿಸಿದರು.


ಇನ್ನೋರ್ವಅತಿಥಿ ಕುಶಾಲಪ್ಪಗೌಡ ಮಾತನಾಡಿ ಆರೋಗ್ಯಕರ ಜೀವನಕ್ಕೆ ಯೋಗದ ಅನುಷ್ಠಾನ ಅಗತ್ಯ, ಯೋಗಾಸನ ಶಿಬಿರದ ಸದುಪಯೋಗಎಲ್ಲರೂ ಪಡೆಯಬೇಕೆಂದು ಹೇಳಿದರು. 


ದೇಲಂಪಾಡಿ ಪ್ರತಿಷ್ಠಾನದ ಅಧ್ಯಕ್ಷರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಬಿರಾರ್ಥಿ ಮುತ್ತುಕೃಷ್ಣ ಅನಿಸಿಕೆ ವ್ಯಕ್ತಪಡಿಸಿದರು. ವೀಣಾ ಸುರೇಶ್ ಪ್ರಾರ್ಥಿಸಿದರು. ಯೋಗಗುರುಗಳದ ಏಕನಾಥ ಬಾಳಿಗ ಹಾಗೂ ಕುಶಾಲಪ್ಪಗೌಡ ಅವರ ಯೋಗದ ಸೇವೆಗೆ ದೇಲಂಪಾಡಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ, ಕಾರ್ತಿಕ್ ಹಾಗೂ ಚಂದ್ರಹಾಸ ಬಾಳ ಇವರು ಸಹಕರಿಸಿದರು. ಡಾ ಸಂತೋಷ್ ಆಳ್ವ ನಿರೂಪಿಸಿ ಧನ್ಯವಾದ ನೀಡಿದರು.


ಮುಂದಿನ ಯೋಗ ಶಿಬಿರ ಮಾರ್ಚ್ 04, 2024 ರಿಂದ ನಡೆಯಲಿಕ್ಕಿದೆ. 



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top