ಭಾಷಾ ಕಲಿಕೆಯಲ್ಲಿ ನಿರ್ದಿಷ್ಟತೆ ಮತ್ತು ನಿರಂತರತೆ ಇರಲಿ: ಹೆಚ್.ಕೆ. ಪುಷ್ಪಲತಾ

Upayuktha
0


ಹಾಸನ: ಮಗುವಿನ ಭಾಷಾ ಬೆಳವಣಿಗೆಯಲ್ಲಿ ಸುಗಮಕಾರರ ಪಾತ್ರ ಬಹಳ ಮುಖ್ಯವಾಗಿದ್ದು, ಭಾಷೆಯ ಕಲಿಕೆಯಲ್ಲಿ ನಿರ್ದಿಷ್ಟತೆ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳಬೇಕು. ಭಾಷಾ ಶುದ್ಧತೆಯಲ್ಲಿ ವ್ಯಾಕರಣಾಂಶಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಮಗು ಇಂಗ್ಲಿಷ್ ಭಾಷೆಯನ್ನು ಮಾತನಾಡುವಾಗ ಸಂದರ್ಭೋಚಿತವಾಗಿ ಕಾಲಗಳ (TENSES) ಪರಿಚಯವನ್ನು ಮಾಡಿಸುವ ಮೂಲಕ ಶಿಕ್ಷಕರು ಮಗುವಿಗೆ ಇಂಗ್ಲಿಷ್ ವಾಕ್ಯಗಳ ಅರ್ಥವನ್ನು ಗ್ರಹಿಸುವಂತೆ ತಿಳಿ ಹೇಳಬೇಕು ಎಂದು ಹಾಸನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಆದ ಹೆಚ್.ಕೆ. ಪುಷ್ಪಲತಾ ಹೇಳಿದರು. 


ಸರಿಸುಮಾರು ಎರಡು ವರ್ಷಗಳಿಂದ ಪ್ರತಿ ಶನಿವಾರ ವಿದ್ಯಾ ಪ್ರವೇಶ ಮತ್ತು ನಲಿಕಲಿ ಜಿಲ್ಲಾ ತಂಡವು ಆಯೋಜಿಸಿ ಡಯಟ್ ವತಿಯಿಂದ ನಡೆಸಲಾಗುತ್ತಿರುವ ಆನ್ಲೈನ್ ವಿಶೇಷ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾಗಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಸಮಕಾಲೀನ ಜಗತ್ತು ಸ್ಪರ್ಧಾತ್ಮಕ ಯುಗವಾಗಿದ್ದು ಮಗುವನ್ನು ಈ ಜಗತ್ತಿನಲ್ಲಿ ಬದುಕಲು ಸಿದ್ಧಗೊಳಿಸುವ ಪ್ರಮುಖ ಜವಾಬ್ದಾರಿ ಶಿಕ್ಷಕರ ಮೇಲಿದೆ. ಜನವರಿ ತಿಂಗಳ ಅಂತ್ಯದಲ್ಲಿ ಹಾಸನ ಜಿಲ್ಲೆಯಲ್ಲಿ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮವು ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ನೆರವಿನೊಂದಿಗೆ ಯಶಸ್ವಿಯಾಗಿ ನಡೆದಿದ್ದು, ಆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಂಗ್ಲಿಷ್ ಕಲಿಕೆಯತ್ತ ಗಮನ ಹರಿಸಿರುತ್ತಾರೆ. ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮಕ್ಕೆ ಉನ್ನತ ಅಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ ಎಂದು ಹೇಳಿದರು. 


ಈ ಆನ್ಲೈನ್ ವಿಶೇಷ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಸಂಚಾಲಕರು ಮತ್ತು ಡಯಟ್ ನ ಉಪನ್ಯಾಸಕರು ಆದ ಹೆಚ್. ಕೆ. ವಿಜಯಲಕ್ಷ್ಮಿರವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಈ ವೇದಿಕೆಯ ಆನ್ ಲೈನ್ ತರಬೇತಿಯು ಶಿಕ್ಷಕರ ಕಲಿಕೆಗೆ ಹೆಚ್ಚು ಒತ್ತು ನೀಡುತ್ತದೆ. ಏಕೆಂದರೆ ಕಲಿಕೆ ನಿರಂತರವಾಗಿದ್ದು ನಮ್ಮ ಬದುಕಿನ ಅಂತ್ಯದವರೆಗೂ ಕಲಿಯುತ್ತಲೇ ಇರುತ್ತೇವೆ. ಈ ತರಬೇತಿಯು ತರಗತಿಗೆ ಪೂರಕವಾಗಿರುವಂತೆ ಆಯೋಜಿಸಲಾಗಿದೆ. ಇನ್ನು ಹೆಚ್ಚಿನ ಶಿಕ್ಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ಎನ್. ಚಿದಾನಂದ ರವರ ಇಂದಿನ ತರಗತಿ ಬಹಳ ಉಪಯುಕ್ತವಾದುವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ನಗರದ ಆರ್.ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಸಂಪನ್ಮೂಲ ವ್ಯಕ್ತಿಯಾಗಿ ಆನ್ ಲೈನ್ ಕ್ಲಾಸ್ ನ್ನು ನಿರ್ವಹಣೆ ಮಾಡುತ್ತ ಶಿಕ್ಷಕರನ್ನು ಕುರಿತು ಇಂಗ್ಲಿಷ್ ಭಾಷೆಯು ಒಂದು ಸಂಪರ್ಕ ಭಾಷೆಯಾಗಿದ್ದು ಇಂದಿನ ದಿನಮಾನಗಳಲ್ಲಿ ಅತ್ಯಗತ್ಯ ಭಾಷೆಗಳಲ್ಲಿ ಒಂದಾಗಿದೆ. ಭಾಷೆಯ ಮೂಲಕವೇ ಮಗು ವ್ಯಕ್ತಿತ್ವವನ್ನು  ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಇಂಗ್ಲಿಷ್ ಭಾಷೆಯನ್ನು ಸೂಕ್ತ ರೀತಿಯಲ್ಲಿ ಕಲಿಯುವ ಮೂಲಕ ಈ ಭಾಷೆಯು ಹೊರಜಗತ್ತನ್ನು ಮಗುವಿಕೆ ಪರಿಚಯಿಸುವಲ್ಲಿ ಯಶಸ್ವಿಯಾಗುತ್ತದೆ. ಇಂಗ್ಲಿಷ್ ಭಾಷೆಯನ್ನು ಕಲಿಯಲು ಮೂಲ ಮತ್ತು ಅತ್ಯಗತ್ಯ ಪದಗಳನ್ನು ಶಿಕ್ಷಕರು ಅನುಕೂಲಿಸಬೇಕು. ಇಂದಿನ ತರಗತಿಯಲ್ಲಿ ಕ್ರಿಯಾಪದಗಳ ಬಳಕೆ ಮತ್ತು ವಿವಿಧ ಕಾಲಗಳಲ್ಲಿ ( ಟೆನ್ಸ್ )  ಕ್ರಿಯಾಪದಗಳನ್ನು ಅರ್ಥಗರ್ಭಿತವಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ಉದಾಹರಣೆಗಳೊಂದಿಗೆ ತಿಳಿಸಿದರು. ಭಾಷೆಯ ಪರಿಶುದ್ಧತೆಯನ್ನು ಮಗು ಕಲಿಯಲು ಇಂಗ್ಲಿಷ್ ನ ಈ ಅಧ್ಯಾಯಗಳು ಬಹಳ ಪ್ರಮುಖವಾಗಿದೆ ಎಂದರು. 


ಅರಸೀಕೆರೆ ತಾಲ್ಲೂಕಿನ ಜಿ. ಹೆಚ್.ಪಿ.ಎಸ್. ಶಂಕರನಹಳ್ಳಿ ಶಿಕ್ಷಕರಾದ ಕೆ. ಎಸ್. ಮಧುಮತಿ ಎಲ್ಲರನ್ನು ಸ್ವಾಗತಿಸಿದರು. ಜಿ.ಹೆಚ್.ಪಿ.ಎಸ್. ದೊಡ್ಡಗೇಣಿಗೆರೆ ಶಾಲೆಯ ಶಿಕ್ಷಕರಾದ ಹೊನ್ನಾಂಬಿಕಾ ರವರು ಪ್ರಾರ್ಥಿಸಿದರೆ, ಹಾಸನ ತಾಲ್ಲೂಕಿನ ಜಿ.ಎಲ್.ಪಿ.ಎಸ್, ಕಣಜನಹಳ್ಳಿ ಶಾಲಾ ಶಿಕ್ಷಕ ಲೋಕೇಶ್ ರವರು ತಾಂತ್ರಿಕವಾಗಿ ಆಯೋಜನೆ ಮಾಡಿದರು. ಶಿಕ್ಷಕ ರೋಷನ್ ಅರಾ ರವರು ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ತಾಲ್ಲೂಕುಗಳು ಹಾಗೂ ಜಿಲ್ಲೆಗಳಿಂದ ಶಿಕ್ಷಕರು ಆನ್ ಲೈನ್ ಟೆಲಿಗ್ರಾಂ ಗ್ರೂಪ್ ನಲ್ಲಿ ಭಾಗವಹಿಸಿ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top