ಗುರುಪುರ: ಗುರುಪುರದ ಅಲೈಗುಡ್ಡೆಯಲ್ಲಿ ನವೀಕರಿಸಲಾದ ಹಿಂದೂ ರುದ್ರಭೂಮಿ `ಮುಕ್ತಿಧಾಮ'ವನ್ನು ರವಿವಾರ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.
ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿರುವ ಪಂಚಾಯತ್ ಮತ್ತು ಊರಿನವರ ಶ್ರಮವನ್ನು ಶಾಸಕರು ಈ ಸಂದರ್ಭದಲ್ಲಿ ಅಭಿನಂದಿಸಿದರು.
ದಾನಿಗಳಲ್ಲೊಬ್ಬರಾದ ಲಕ್ಷ್ಮಣ ಶೆಟ್ಟಿ , ಗುರುಪುರ ಪಂಚಾಯತ್ ಅಧ್ಯಕ್ಷೆ ಸಫರಾ ಎನ್, ನಿರ್ವಹಣಾ ಸಮಿತಿ ಅಧ್ಯಕ್ಷ ವಿಷ್ಣು ಕಾಮತ್,ರುದ್ರಭೂಮಿ ಸಮಿತಿ ಕಾರ್ಯದರ್ಶಿ ಪಾಂಡುರ೦ಗ ಕಾಮತ್, ಪಂಚಾಯತ್ ಸದಸ್ಯರಾದ ಜಿ. ಎಂ. ಉದಯ ಭಟ್, ರಾಜೇಶ್ ಸುವರ್ಣ, ಯಶವಂತ ಶೆಟ್ಟಿ,
ಸಚಿನ್ ಅಡಪ, ಹೋಟೆಲ್ ಉದ್ಯಮಿ ಸುಧೀರ್ ಕಾಮತ್,ಹಾಗೂ ಪಂಚಾಯತ್ ಸದಸ್ಯರು,ಬಿಜೆಪಿ ಮುಖಂಡರು,ಪದಾಧಿಕಾರಿಗಳು, ಕಾರ್ಯಕರ್ತರು,ಗ್ರಾಮಸ್ಥರು ಮೊದಲಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ