ಶಿವಮೊಗ್ಗ: ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವದ ಪೂರ್ವಭಾವಿಯಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, 22ರಂದು ಶಿಷ್ಯ ಸ್ವೀಕಾರ ನಡೆಯಲಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾ ಹವ್ಯಕ ಮಾಜಿ ಅಧ್ಯಕ್ಷ, ನ್ಯಾಯವಾದಿ ಅಶೋಕ ಜಿ. ಭಟ್ಟ, ಅಂದು ಬೆಳಗ್ಗೆ ಕಾಷಾಯ ವಸ್ತ್ರ ಧಾರಣೆ, ಮಹಾವಾಕ್ಯೋಪದೇಶ, ನಾಮಕರಣ, ಯೋಗಪಟ್ಟ, ಬ್ರಹ್ಮ ವಿದಾಶೀರ್ವಚನ ನಡೆಯಲಿದೆ ಎಂದರು.
ಹಾಲಿ ಪೀಠಾಧಿಪತಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನಾಗರಾಜ ಭಟ್ಟ ಎನ್ನುವ ಶಿಷ್ಯ ನನ್ನು ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ ಎಂದರು.
22ರಂದು ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದರು, ಎಡನೀರುಮಠದ ಸಚ್ಚಿದಾನಂದ ಸ್ವಾಮೀಜಿ, ಕಾಂಚಿಪುರಂನ ಆತ್ಮಬೋಧ ತೀರ್ಥರು, ಸಹಜಾನಂದ ತೀರ್ಥರು, ಅಂಜನಾನಂದ ತೀರ್ಥರು, ಯಡತೊರೆಯ ಶಂಕರಭಾರತಿ ಸ್ವಾಮೀಜಿ, ನೆಲೆಮಾವಿನ ಮಾಧವಾನಂದ ಭಾರತೀ ಸ್ವಾಮೀಜಿ, ಕೂಡ್ಲಿ ಶೃಂಗೇರಿಮಠದ ವಿದ್ಯಾವಿಶ್ವೇಶ್ವರತೀರ್ಥರು ಮೊದಲಾದವರು ಸಾನಿಧ್ಯ ವಹಿಸುವರೆಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅತಿಥಿಯಾಗಿರುವರು ಎಂದು ಮಾಹಿತಿ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ