ಫೆ. 11: ಉರ್ವ ಶ್ರೀ ಮಾರಿಯಮ್ಮ ಕೃತಿ ಬಿಡುಗಡೆ

Chandrashekhara Kulamarva
0



ಮಂಗಳೂರು: ನಗರದ ಉರ್ವ ಮಾರಿಗುಡಿಯು ಬಹುಕೋಟಿ ರೂಪಾಯಿಗಳ ವೆಚ್ಚದಲ್ಲಿ ಜೀರ್ಣೋದ್ಧಾರ, ನೂತನ ಸಭಾಗೃಹ ನಿರ್ಮಾಣ ಮತ್ತು ಇತರ ನವೀಕರಣಗಳನ್ನು ಕಂಡಿದ್ದು ಇದೇ 11 ರಿಂದ 15 ರ ವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ದೇವಸ್ಥಾನದ ಇತಿಹಾಸ, ಚರಿತ್ರೆ ಮತ್ತು ಪ್ರಸ್ತುತದ ನಡಾವಳಿಗಳ ವಿಶೇಷತೆಗಳನ್ನು ಒಳಗೊಂಡ ವಿಶಿಷ್ಟ ಕೃತಿ ಉರ್ವ ಶ್ರೀಮಾರಿಯಮ್ಮ ಎಂಬ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. 




ಹಿರಿಯ ಕವಿ ಸಾಹಿತಿಗಳಾದ ಡಾ. ವಸಂತಕುಮಾರ ಪೆರ್ಲ ಅವರು ಈ ಅಧ್ಯಯನ ಕೃತಿಯನ್ನು ರಚಿಸಿದ್ದು, ಉದ್ಘಾಟನೆಯ ದಿನ, ಅಂದರೆ ದಿನಾಂಕ 11 ರಂದು ಸಂಜೆ 5 ಗಂಟೆಗೆ ಈ ಕೃತಿಯನ್ನು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಬಿಡುಗಡೆಗೊಳಿಸುವರು. 



ಕೇಮಾರಿನ ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಮತ್ತು ಬೋಳೂರಿನ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತಪ್ರಾಣ ಅವರ ಉಪಸ್ಥಿತಿ ಇರಲಿದ್ದು, ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್, ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಂಕಾಳ ವೈದ್ಯ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರು ಮತ್ತು ಇತರ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .


 

إرسال تعليق

0 تعليقات
إرسال تعليق (0)
To Top