ಫೆ. 11: ಅಲೆವೂರಾಯಾಭಿನಂದನಮ್- ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರ ಷಷ್ಟ್ಯಬ್ದಿ ಸಮಾರಂಭ

Upayuktha
0



ಮಂಗಳೂರು: ಸರಯೂ ಬಾಲಯಕ್ಷ ವೃಂದದ ಸಂಸ್ಥಾಪಕರು, ಪ್ರಸಿದ್ಧ ಯಕ್ಷ ಕಲಾವಿದರು, ಅಧ್ಯಾಪಕ, ಪ್ರಸಂಗ ಕರ್ತ ಹಾಗೂ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರ ಷಷ್ಟ್ಯಬ್ದಿ ಪ್ರಯುಕ್ತ ಅಭಿನಂದನಾ ಸಮಾರಂಭವು ಫೆ.11ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.



ದಿನವಿಡೀ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9:00ರಿಂದ ರಾತ್ರಿ 9:30ರ ವರೆಗೆ ಕಾರ್ಯಕ್ರಮ ಮುಂದುವರಿಯುತ್ತದೆ. ಬೆಳಗ್ಗೆ 9:00ರಿಂದ 11:00ರ ವರೆಗೆ ಯಕ್ಷಗಾನ ಬಯಲಾಟ ನಡೆಯಲಿದೆ. ವರ್ಕಾಡಿ ರವಿ ಅಲೆವೂರಾಯರು ರಚಿಸಿದ 'ಶ್ರೀ ಮಾತೇ ಭದ್ರಕಾಳಿ' ಎಂಬ ಪ್ರಸಂಗವನ್ನು ಸುಂದರ ಕೋಟ್ಯಾನ್ ಅಧ್ಯಕ್ಷತೆಯ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ ತಂಡ ಆಡಿ ತೋರಿಸಲಿದೆ.



ಬೆಳಗ್ಗೆ 11:ರಿಂದ 12:00ರ ವರೆಗೆ ಸೀತಾರಾಮ ಶೆಟ್ಟಿ ಕೊಯಿಕೂರು ಅವರ ನಿರ್ದೇಶನದಲ್ಲಿ ಯಶಸ್ವಿ ಕಲಾವೃಂದ ಮಕ್ಕಳ ಮೇಳ, ಕೊಮೆ ತೆಕ್ಕಟ್ಟೆ ಇವರಿಂದ ತಾಳಮದ್ದಳೆ ನಡೆಯಲಿದೆ. ಅಪರಾಹ್ನ 1:00ರಿಂದ 2:30ರ ವರೆಗೆ ಡಾ| ಪಿ. ವಾಮನ್ ಶೆಣೈ ಮಂಗಳೂರು ಅವರ ಅಧ್ಯಕ್ಷತೆಯಲ್ಲಿ ನವಭಾರತ ಯಕ್ಷಗಾನ ಅಕಾಡೆಮಿ ರಥಬೀದಿ ಮಂಗಳೂರು ಇವರಿಂದ 'ಶ್ರೀ ದೇವಿ ಮಹಿಷಮರ್ದಿನಿ' ತಾಳಮದ್ದಳೆ ನಡೆಯಲಿದೆ.



ಮಧ್ಯಾಹ್ನ 2:30ರಿಂದ ರವು ಅಲೆವೂರಾಯ ವರ್ಕಾಡಿ ವಿರಚಿತ ಇಳಾರಜತ ಬಯಲಾಟವನ್ನು ಅತಿಥಿ ಕಲಾವಿದರು ಹಾಗೂ ಸರಯೂ ಯಕ್ಷಕಲಾವೃಂದದ ಕಲಾವಿದರು ನಡೆಸಿಕೊಡಲಿದ್ದಾರೆ.



ಸಂಜೆ 5:30ರಿಂದ ಅಲೆವೂರಾಯಾಭಿನಂದನಮ್ 60 ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀಮದೆಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಯಕ್ಷಗಾನ ಕಲಾಪೋಷಕರು ಹಾಗೂ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇದರ ಯಜಮಾನರಾದ ಟಿ.ಆರ್‌. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.



ಅತಿಥಿಗಳಾಗಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ| ಪಿ.ವಿ ಶೆಣೈ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ, ಮಂಗಳೂರು ಮಹಾನಗರಪಾಳಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಹಾಗೂ ಅಂತಾರಾಷ್ಟ್ರೀಯ ಖ್ಯತಿ ಕಲಾಸಂಘಟಕ ಶಿವಾನಂದ ಹೆಗಡೆ ಕೆರೆಮನೆ ಅವರು ಭಾಗವಹಿಸಲಿದ್ದಾರೆ.



ಸಮಗ್ರ ಕಾರ್ಯಕ್ರಮವು ಅಲೆವೂರಾಯಾಭಿನಂದನಮ್ ಸಮಿತಿಯ ಉಸ್ತುವಾರಿಯಲ್ಲಿ ನಡೆಯಲಿದೆ. ಕ.ಸಾ.ಪ ಮಾಜಿ ಅಧ್ಯಕ್ಷ ಡಾ| ಹರಿಕೃಷ್ಣ ಪುನರೂರು ಗೌರವ ಸಂಚಾಲಕರಾಗಿ, ಸರಯೂ ಬಾಲಯಕ್ಷವೃಂದ, ಮಕ್ಕಳ ಮೇಳದ ಅಧ್ಯಕ್ಷ ಮಧುಸೂದನ ಅಲೆವೂರಾಯ ವರ್ಕಾಡಿ, ಸಂಸದ ನಳಿನ್ ಕುಮಾರ್ ಕಟೀಲು ಗೌರವಾಧ್ಯಕ್ಷರಾಗಿ, ಕೆರೆಮನೆ ನರಸಿಂಹ ಹೆಗಡೆ ಸಂಚಾಲಕರಾಗಿ ಈ ಸಮಿತಿಯಲ್ಲಿದ್ದಾರೆ. ಕುಸುಮಾ ಅಲೆವೂರಾಯ, ವಿಜಯಲಕ್ಷ್ಮೀ ಎಲ್.ಎನ್ ಅವರು ಸಮಿತಿಯ ಸಂಚಾಲಕಿಯರಾಗಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top