ಪತ್ರಕರ್ತರ ಸಮ್ಮೇಳನದಲ್ಲಿ ಗಮನ ಸೆಳೆದ ಛಾಯಾಚಿತ್ರ ಮತ್ತು ವ್ಯಂಗ್ಯ ಚಿತ್ರಗಳ ಪ್ರದರ್ಶನ

Upayuktha
0


ದಾವಣಗೆರೆ: ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವದಲ್ಲಿ ಹಮ್ಮಿಕೊಂಡಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿರುವ ಛಾಯಚಿತ್ರಗಳ ಮತ್ತು ವ್ಯಂಗ್ಯ ಚಿತ್ರಗಳ ಪ್ರದರ್ಶನ ಸಮ್ಮೇಳನಕ್ಕೆ ಆಗಮಿಸಿರುವವರ ಗಮನ ಸೆಳೆಯಿತು.


ವ್ಯಂಗ್ಯ ಚಿತ್ರ ಪ್ರದರ್ಶನದಲ್ಲಿ ವ್ಯಂಗ್ಯ ಚಿತ್ರಕಾರರಾದ ನಾಗರಾಥ್ ಗೌರೀಪುರ, ಶರದ ಕುಲಕರ್ಣಿ, ನಂಜುಂಡ ಸ್ವಾಮಿ, ಎಲ್ಲೆಬ್ ರಾವ್, ಸುಬ್ರಹ್ಮಣ್ಯ ಸೇರಿದಂತೆ ಅನೇಕರು ಬಿಡಿಸಿರುವ ರಾಜಕಾರಣಿಗಳ, ಚಿತ್ರ ನಟರ ಸೇರಿದಂತೆ ವಿವಿಧ ವ್ಯಂಗ್ಯ ಚಿತ್ರಗಳ ಸಮ್ಮೇಳನಕ್ಕೆ ಆಗಮಿಸಿರುವವರ ಗಮನ ಸೆಳೆಯುತ್ತಿದೆ.


ಛಾಯಾಚಿತ್ರ ಪ್ರದರ್ಶನದಲ್ಲಿ ಛಾಯಾಗ್ರಾಹಕರಾದ ಪ್ರಜಾವಾಣಿಯ ಸತೀಶ್ ಬಡಿಗೇರ್, ವಿವೇಕ್, ಜನತಾವಾಣಿಯ ರಫೀಕ್,  ಹೆಚ್ ಬಿ ಮಂಜುನಾಥ್ ಸೆರೆ ಹಿಡಿದಿರುವ ಜಿಲ್ಲೆಯ ಛಾಯಚಿತ್ರಗಳನ್ನು ಸಮ್ಮೇಳನಕ್ಕೆ ಆಗಮಿಸಿರುವವರು ಕುತೂಹಲದಿಂದ ವೀಕ್ಷೀಸಿದರು. 


ಅದರಲ್ಲೂ ಹೆಚ್ ಬಿ ಮಂಜುನಾಥ್ ತೆಗೆದಿರುವ ಹಳೇ ಚಿತ್ರಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ, ಡಾ ಅಬ್ದುಲ್ ಕಲಾಂ , ದಾವಣಗೆರೆಗೆ ಭೇಟಿ ನೀಡಿದಾಗಿನಿಂದ ಚಿತ್ರಗಳು, ಸಚಿವ  ಮಲ್ಲಿಕಾರ್ಜುನ್ ಮತ್ತು ಡಾ ಪ್ರಭಾ ಅವರ ವಿವಾಹದ ಚಿತ್ರ ಸೇರಿದಂತೆ ಅನೇಕ ಚಿತ್ರಗಳ ನೋಡುಗರನ್ನು ಕಟ್ಟಿ ಹಾಕುತ್ತಿವೆ. ಕಾರ್ಯಕ್ರಮಕ್ಕೆ ಆಗಮಿಸಿರುವ ಎಸ್ಪಿ ಉಮಾ ಪ್ರಶಾಂತ್ ಅವರು ಕೂಡ ಛಾಯಾ ಚಿತ್ರಗಳ ವೀಕ್ಷಣೆ ಮಾಡಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top