ಮಂಗಳೂರು: ಡಾ ಸಿರಿ ಪಾರ್ವತಿ ಬೀಡುಬೈಲು MDS ಅವರು ಕರ್ನಾಟಕ ರಾಜ್ಯದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 2023ರಲ್ಲಿ ನಡೆಸಿದ MDS (Conservative Dentistry and Endodontics) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ನೊಂದಿಗೆ ಚಿನ್ನದ ಪದಕವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಡೆದುಕೊಂಡಿದ್ದಾರೆ.
ಹಾಸನದ ಶ್ರೀ ಹಾಸನಾಂಬ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರು 81.29 ಶೇಕಡ ಅಂಕಗಳೊಂದಿಗೆ ವಿಶಿಷ್ಟ ದಾಖಲೆ ಮಾಡಿದ್ದಾರೆ. ಇವರು ನಿವೃತ್ತ ಪ್ರೊ. ಬೀಡುಬೈಲು ಗಣಪತಿ ಭಟ್ ಮತ್ತು ತ್ರಿವೇಣಿ ಭಟ್ ಅವರ ಸುಪುತ್ರಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಪತಿ ಡಾ. ಅಶ್ವಿನ್ ಪರಕ್ಕಜೆ MDS ಅವರೊಂದಿಗೆ ವೃತ್ತಿನಿರತರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ