ಧರ್ಮಸ್ಥಳ: ಚಾಮುಂಡೇಶ್ವರಿ ಭಜನಾ ಮಂಡಳಿ ಮುಳಿಕ್ಕಾರು 25ನೇ ವಾರ್ಷಿಕೋತ್ಸವ

Upayuktha
0


ಧರ್ಮಸ್ಥಳ: ಚಾಮುಂಡೇಶ್ವರಿ ಭಜನಾ ಮಂಡಳಿ ಮುಳಿಕ್ಕಾರು ಧರ್ಮಸ್ಥಳ ಇದರ 25ನೇ ವರ್ಷದ ವಾರ್ಷಿಕೋತ್ಸವ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಅವರು ಇಂದಿನ ಯುವಪೀಳಿಗೆ ವಿದ್ಯಾವಂತರಾಗಿದ್ದಾರೆ. ವಿಚಾರವಂತರಾಗಿದ್ದಾರೆ. ಆದರೇ ಆಚಾರವಂತರಾಗಬೇಕಾದರೆ ಇಂತಹ ಭಜನಾಮಂದಿರಗಳು ಅವಶ್ಯಕ ಎಂದರು. ಹಾಗೆಯೇ ಹಿಂದೂಧರ್ಮದ ಸಂಕೇತವಾದ ಹಣೆಬೊಟ್ಟು, ತಿಲಕ ಹಚ್ಚಿಕೊಳ್ಳುವಲ್ಲಿ ಸಂಕೋಚ ತರವಲ್ಲ, ಅದನ್ನು ಧೈರ್ಯದಿಂದ ಧರಿಸಬೇಕು ಎಂದು ಕಿವಿಮಾತು ಹೇಳಿದರು. ನಮ್ಮ ಧಾರ್ಮಿಕ ಸ್ಥಳಗಳನ್ನು ಆರಾಧಿಸುವುದು ಮಾತ್ರವಲ್ಲ, ಅನುಭವಿಸಬೇಕು ಎಂದು ನುಡಿದ ಅವರು ಭಜನಾಮಂದಿರದ ಏಳಿಗೆಗಾಗಿ ದುಡಿದ ಇಡೀ ಮುಳಿಕ್ಕಾರು ಜನರನ್ನು ತುಂಬು ಹೃದಯದಿಂದ ಪ್ರಶಂಸಿಸಿದರು.


ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಕುಮಾರಿ ಹಾರಿಕಾ ಮಂಜುನಾಥ್ ಭಜನೆಯ ಮಹತ್ವ ಮತ್ತು ಯುವಪೀಳಿಗೆಯ ಜವಾಬ್ದಾರಿಯ ಬಗ್ಗೆ ತುಂಬಾ ಸ್ಪುಟವಾಗಿ ಮಾತನಾಡುತ್ತಾ, ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ. ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರತಿಯೊಂದು ಮನೆಯೂ ಅಯೋದ್ಯೆಯಾಗಬೇಕು ಎಂದರು.ಹಿಂದೂ ಧರ್ಮದ ಉಳಿವಿನಲ್ಲಿ ತಾಯಂದಿರ ಪಾತ್ರವನ್ನು ಮಹಾಭಾರತದ ಕಥೆಯ ಮೂಲಕ ಅದ್ಭುತವಾಗಿ ವಿವರಿಸಿದರು.ಸಂಸ್ಕೃತ ಶ್ಲೋಕಗಳ ಜೊತೆಗೆ ಧರ್ಮದ ಬಗ್ಗೆ ನಿರರ್ಗಳವಾಗಿ ಧಾರ್ಮಿಕ ಭಾಷಣ ಮಾಡಿದ ಹಾರಿಕಾ ಅವರು ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿದರು.


ತಾಲೂಕು ಬಿಜೆಪಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ್ ರಾವ್ ಅವರು ಮಾತನಾಡಿ ಮುಳಿಕ್ಕಾರಿನ ಭಜನಾಮಂದಿರ ನಿರ್ಮಾಣದ ಹಿಂದಿದ್ದ ಕಷ್ಟಗಳು, ಹಿರಿಯರ ತ್ಯಾಗಗಳನ್ನು ನೆನೆದು ಯಶಸ್ವಿ ಕಾರ್ಯಕ್ರಮದ ಆಯೋಜನೆಗಾಗಿ ಮಂಡಳಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.


ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ಧನಕೀರ್ತಿ ಅರಿಗ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ  ವಿಮಲಾ ಪರಮೇಶ್ವರ್ ,ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪ್ರೀತಮ್. ಡಿ,ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷಿತ್ ಜೈನ್ ,ಮುರಳಿದರ ದಾಸ್, ಶ್ರೀಮತಿ ದಯಾಳಿನಿ, ಭಜನಾ ಮಂಡಳಿ ಸ್ಥಾಪಕ ಅಧ್ಯಕ್ಷ ವೀರಪ್ಪ ಮಲೆಕುಡಿಯ ,ಭಜನಾ ಮಂಡಳಿಯ ಅಧ್ಯಕ್ಷ ಯೋಗೇಶ್ ಗೌಡ ಉಪಸ್ಥಿತರಿದ್ದರು


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top