ಸಂಚಾರಿ ಪೊಲೀಸರಿಂದ ರಕ್ತದಾನ : 25 ಯೂನಿಟ್ ರಕ್ತ ಸಂಗ್ರಹ

Upayuktha
0



ಶಿವಮೊಗ್ಗ: ಇಲ್ಲಿನ‌ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗದ ಆಶಾ ಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.



ಈ ರಕ್ತದಾನ ಶಿಬಿರವನ್ನು ಭದ್ರಾವತಿ ‌ಸಂಚಾರಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ಹಾಲೇಶಪ್ಪನವರು ಆಯೋಜಿಸಿದ್ದರು. ಇದು ಹಾಲೇಶಪ್ಪನವರ ಆಯೋಜನೆಯ 17 ನೇ ರಕ್ತದಾನ ಶಿಬಿರವಾಗಿದೆ. ಶಿಬಿರವನ್ನು ಶಿವಮೊಗ್ಗ ಸಂಚಾರಿ ವೃತ್ತದ ಸಿಪಿಐ  ಸಂತೋಷ್ ಕುಮಾರ್ ಡಿ.ಕೆ. ರವರು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಪಿ.ಎಸ್.ಐ. ಗಳಾದ ಶಿವಣ್ಣನವರ್, ನವೀನ್ ಮಠಪತಿ‌ ಹಾಗೂ ತಿರುಮಲೇಶ್ ರವರು ಹಾಜರಿದ್ದರು.



ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅವರ ಕುಟಂಬದವರು ಹಾಗೂ ಸಾರ್ವಜನಿಕರು ಸೇರಿದಂತೆ ಹಲವರು ರಕ್ತದಾನ ಮಾಡಿದರು. ಅಂತಿಮವಾಗಿ 25 ಯೂನಿಟ್ ಗಳಷ್ಟು ರಕ್ತ ಸಂಗ್ರಹವಾಯಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top