ಬೆಂಗಳೂರು: ಶ್ರೀ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಫೆಬ್ರವರಿ 8, ಗುರುವಾರ ಸಂಜೆ 5-45ಕ್ಕೆ ಶ್ರೀಮದ್ ಉತ್ತರಾದಿ ಮಠದಲ್ಲಿ (ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎದುರು) ಏರ್ಪಡಿಸಿರುವ ಸಮಾರಂಭದಲ್ಲಿ 'ರಾಷ್ಟ್ರಪ್ರಶಸ್ತಿ' ಪುರಸ್ಕೃತ ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ " ಶ್ರೀ ಮಧ್ವ ಪುರಂದರ" ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ : ಶ್ರೀ ಪೂಜ್ಯ ಗುತ್ತಲ್ ರಂಗಾಚಾರ್ (ಕುಲಪತಿಗಳು, ಶ್ರೀ ಜಯತೀರ್ಥ ವಿದ್ಯಾಪೀಠ), ಡಾ|| ಸತ್ಯಧ್ಯಾನಾಚಾರ್ ಕಟ್ಟಿ (ಪ್ರಾಂಶುಪಾಲರು, ಶ್ರೀ ಜಯತೀರ್ಥ ವಿದ್ಯಾಪೀಠ), ಡಾ|| ಆರ್.ಕೆ. ಪದ್ಮನಾಭ (ಹಿರಿಯ ಸಂಗೀತ ವಿದ್ವಾಂಸರು) ಮತ್ತು ಶ್ರೀ ಎಸ್. ವೆಂಕಟೇಶಮೂರ್ತಿ (ಅಧ್ಯಕ್ಷರು, ಶ್ರೀವಾರಿ ಫೌಂಡೇಶನ್) ಇವರುಗಳು ಉಪಸ್ಥಿತರಿರುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ