ಶಿಕಾರಿಪುರ ಪೊಲೀಸ್ ಠಾಣೆ ಎದುರು ಬಿಜೆಪಿ ಪ್ರತಿಭಟನೆ

Upayuktha
0


ಶಿಕಾರಿಪುರ
:  ಸಾರ್ವಜನಿಕ ರಸ್ತೆಯಲ್ಲಿ  ಬೈಕ್ ವೀಲಿಂಗ್ ಮಾಡಬೇಡಿ  ಸಾರ್ವಜನಿಕರಿಗೆ  ತೊಂದರೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಕೆಲವು ಮುಸ್ಲಿಂ ಯುವಕರು  ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿರುವುದು ಖಂಡನಿಯ ಎಂದು ಸಂಸದ ರಾಘವೇಂದ್ರ ಹೇಳಿದರು.



ಅವರು ನಗರದ  ಪಟ್ಟಣಪೊಲೀಸ್  ಠಾಣೆ ಎದುರು ನಡೆದ ಪ್ರತಿಭಟನಾ  ಸಭೆಯನ್ನು  ಉದ್ದೇಶಿಸಿ ಮಾತನಾಡುತ್ತಿದ್ದರು.  ದೊಡ್ಡಪೇಟೆ ನಿವಾಸಿ ಸುಶೀಲ್ (26) ಹಲ್ಲೆಗೆ ಒಳಗಾದವರಾಗಿದ್ದು ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕೆಲವು ಮುಸ್ಲಿಂ  ವಿಚಿದ್ರಕಾರಿ ಮನಸ್ಸುಗಳು ಅಶಾಂತಿ ಉಂಟು ಮಾಡುವ ಹುನ್ನಾರ ನಡೆಸಿವೆ ಎಂದರು.

 


ಶಿರಾಳಕೊಪ್ಪದ  ಬಿಲಾಲ್ ಎಂಬ ವ್ಯಕ್ತಿ ತನ್ನ ಸಾಮಿಲ್ ನಲ್ಲಿ ನವಿಲು, ಒಂಟೆ ಸೇರಿದಂತೆ ಅನೇಕ ಪ್ರಾಣಿಗಳನ್ನು ಕಾನೂನು ಬಾಹಿರವಾಗಿ  ಇಟ್ಟುಕೊಂಡಿದ್ದ, ಶಿರಾಳಕೊಪ್ಪ ಪೊಲೀಸ್ ಠಾಣೆಯ ಸಮರ್ಥ ಪೊಲೀಸ್ ಅಧಿಕಾರಿಯಾಗಿದ್ದ ಮಂಜುನಾಥ್ ಕುರಿ  ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವರನ್ನು ವರ್ಗಾವಣೆ ಮಾಡಿಸಿ, ಕಾಂಗ್ರೆಸ್ ನಾಯಕರ ತಾಳಕ್ಕೆ ಕುಣಿಯುವ ಪೊಲೀಸ್  ಅಧಿಕಾರಿಯನ್ನು ವರ್ಗಾಯಿಸಿಕೊಂಡು ಬಂದು ಪೊಲೀಸ್ ಠಾಣೆಗೆ ಹಿಂದೂ ಹೋರಾಟಗಾರರನ್ನು ಕರೆಯಿಸಿ ಧಮ್ಕಿ ಹಾಕುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಮೂಲಕ ಮಾಡುತ್ತಿದ್ದಾರೆ ಇದಕ್ಕೆ ಯಾವ ಹಿಂದೂ ಕಾರ್ಯಕರ್ತರು ಭಯಪಡಬೇಕಾಗಿಲ್ಲ.



ಶಿಕಾರಿಪುರದಲ್ಲಿ ಶಾಂತಿ ನೆಲೆಸಲು ಹೋರಾಟ ಮಾಡಿದ ಯಡಿಯೂರಪ್ಪನವರಂತ ನಾಯಕರು ಮತ್ತು ಒಂದು ತಲೆಮಾರಿನ  ನೂರಾರು ಜನರ ಪರಿಶ್ರಮದಿಂದ ಈಗ ಶಾಂತಿ ನೆಲೆಸಿದೆ ಇದನ್ನು ಹಾಳು ಮಾಡುವ ಯಾವುದೇ ಶಕ್ತಿಯನ್ನು ನಾವು ಸಹಿಸುವುದಿಲ್ಲ ಎಂದರು. ಕೊಲೆ ಯತ್ನ ಮಾಡಿದ ನಾಲ್ಕು ಜನರ ಪೈಕಿ ಇಬ್ಬರನ್ನು ಈಗಾಗಲೇ ಬಂಧಿಸಿದ್ದು ಉಳಿದ ಇನ್ನಿಬ್ಬರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದರು.



ನಮ್ಮ ಸರ್ಕಾರ ಇದೆ ಏನಾದರೂ ಮಾಡಿ ಬಯಸುತ್ತೇವೆ ಎನ್ನುವ ಯೋಚನೆ ಹೊಂದಿದ್ದರೆ ಹುಷಾರ್, ಆ ಘಟನೆಗಳನ್ನು  ನಡೆಸಿ ಹಿಂದೂಗಳನ್ನು ಭಯಪಡಿಸುತ್ತೇವೆ ಎಂದರೆ ಸಾಧ್ಯವಾಗದು, ಸರ್ಕಾರ ಈ  ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸದೆ ಹೋದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top