ಅಯೋಧ್ಯೆಯಲ್ಲಿ ರಾಮನ ಭಾರ ಹೊತ್ತ ರವಿ

Upayuktha
0

 



ಅಯೋಧ್ಯೆ: ಕರ್ನಾಟಕದ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ನೇತಾರ ಸಿ.ಟಿ ರವಿಯವರು ಮಂಗಳವಾರ ಅಯೋಧ್ಯೆ ರಾಮಮಂದಿರದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಶ್ರೀರಾಮನ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿ ಪಲ್ಕಕ್ಕಿಯನ್ನು ಹೆಗಲಲ್ಲಿ ಹೊತ್ತು ಉತ್ಸವದಲ್ಲಿ ಭಾಗಿಯಾದರು.

 


ಮಂಗಳವಾರದ ಕಲಶಾರಾಧನೆ ಕಲಶಾಭಿಷೇಕದ ಸೇವಾರ್ಥಿಯಾಗಿದ್ದರು. ವಿಧಿಪೂರ್ವಕ ಸಂಕಲ್ಪ ನೆರವೇರಿಸಿ  ಪೇಜಾವರ ಶ್ರೀಗಳ ಮೂಲಕ ಬಾಲರಾಮನಿಗೆ  ಕಲಶಾಭಿಷೇಕವನ್ನು ನೆರವೇರಿಸಿ ಶ್ರೀಗಳಿಂದ ರಜತಕಲಶಪ್ರಸಾದ ಸ್ವೀಕರಿಸಿದರು. ರವಿಯವರ ಪತ್ನಿ, ಕುಟುಂಬಸ್ಥರು ಉಪಸ್ಥಿತರಿದ್ದರು. ಧಾರ್ಮಿಕ ಸೇವಾಧುರೀಣರಾದ ಕೆ ಆರ್ ನಗರದ ನಾಗರಾಜ ಪುರಾಣಿಕರೂ ಮಂಗಳವಾರದ ಕಲಶಾಭಿಷೇಕ ಸೇವಾರ್ಥಿಯಾಗಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top