ಹಿಂದೂ ಭಾವನೆಗಳಿಗೆ ಧಕ್ಕೆ, ಕ್ರಿಶ್ಚಿಯನ್ ಮಿಷನರಿ ಶಾಲೆ ತ್ಯಜಿಸಲು ಸಕಾಲ: ಭರತ್ ಶೆಟ್ಟಿ ವೈ

Upayuktha
0

ಮಂಗಳೂರು: ಕ್ರಿಶ್ಚಿಯನ್ ಮಿಷಿನರಿ ಶಾಲೆಗಳಲ್ಲಿ ಹಿಂದೂ ವಿರೋಧಿ ಭಾವನೆ ವ್ಯಕ್ತವಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೂ ಸಾಂಪ್ರದಾಯಿಕ ಹೂ ಮುಡಿಯಲು, ಬಳೆ ಹಾಕಲು, ತಿಲಕ ಹಾಕಲು ಹೀಗೆ ಹಲವು ಆಚಾರಗಳನ್ನು ನಮ್ಮ ಹೆಣ್ಮಕಳ್ಳಿಂದ ದೂರ ಮಾಡಿದ ಕ್ರಿಶ್ಚಿಯನ್ ಮಿಷನರಿಗಳು ಇದೀಗ ರಾಮ ಮಂದಿರದ ವಿರುದ್ದದ ದ್ವೇಷ ಭಾವನೆ ಪಸರಿಸಲು ಹೂಡುತ್ತಿರುವ ಷಡ್ಯಂತ್ರ ಸಹಿಸಲು ಅಸಾಧ್ಯ. ಸಂಬಂಧಪಟ್ಟ ಶಾಲೆಯ ಶಿಕ್ಷಕಿ ವಿರುದ್ದ ಆಡಳಿತ ಮಂಡಳಿ ಕ್ರಮ ಜರುಗಿಸಿ. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಡಾ.ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.


ನಗರದ ಜೆರೋಸ ಶಾಲೆಯ ಶಿಕ್ಷಕಿ ಶ್ರೀರಾಮ ಹಾಗೂ ಮಂದಿರದ ವಿರುದ್ದ ವಿದ್ಯಾರ್ಥಿಗಳ ಮುಂದೆ ಆಡಿದರು ಎನ್ನಲಾದ ಹಿಂದೂ ಭಾವನೆಗೆ ಧಕ್ಕೆ ತರುವ ಮಾತುಗಳನ್ನು ಶಾಸಕರು‌ ಖಂಡಿಸಿದ್ದಾರೆ.


ಇಂತಹ ಹಿಂದೂ ವಿರೋಧಿ ಶಾಲೆಗಳನ್ನು ತ್ಯಜಿಸಿ, ನಮ್ಮ ಸಂಪ್ರದಾಯಕ್ಕೆ ಮನ್ನಣೆ ನೀಡುವ ಶಾಲಾ ,ಕಾಲೇಜುಗಳಿಗೆ ಸೇರಿ ವಿದ್ಯಾಭ್ಯಾಸ ಮಾಡುವ ಬಗ್ಗೆ  ಒಮ್ಮತದ ಅಭಿಪ್ರಾಯ ಮೂಡಬೇಕಿದೆ. ಈ ಬಗ್ಗೆ ಪೋಷಕರು ಚಿಂತಿಸಲು ಇದು ಸಕಾಲ ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.


ಕೃಷ್ಣಾಪುರ ಶಾಲೆಯಲ್ಲಿ ರಕ್ಷಾ ಬಂಧನ ಕಿತ್ತು ಎಸೆಯಲಾಯಿತು. ಇದೀಗ ರಾಮನ ಕುರಿತಂತೆ ನಿಂದನೆ ಸಹಿಸಲು ಅಸಾಧ್ಯ. ಇದೇ ಬಗ್ಗೆ ಜೀಸಸ್ ಹಾಗೂ ಅವರ ಮೂರ್ತಿ ಪೂಜೆಯ ಬಗ್ಗೆ ಮಾತನಾಡಿದರೆ ಇಷ್ಟರವರೆಗೆ ಡೋಂಗಿ ಜಾತ್ಯಾತೀತ ಹೋರಾಟಗಾರರು ಬೀದಿಗೆ ಬರುತ್ತಿದ್ದರು. ಕಾಂಗ್ರೆಸ್ ಪಕ್ಷದ ನಾಯಕರೂ ಕೂಡ ಮೌನ ವಹಿಸಿದ್ದು, ಹಿಂದೂ ವಿರೋಧಿ ಭಾವನೆಯನ್ನು ತೋರಿಸಿದ್ದಾರೆ ಎಂದು ಟೀಕಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top