ಗೋಳಿಯಡ್ಕ : ಮುಳಿಯಾರಿನ ಗೋಳಿಯಡ್ಕ ಶ್ರೀ ವೆಂಕಟ್ರಮಣ ಆದಿಭೈರವ ಅಮ್ಮನವರ್ ಕ್ಷೇತ್ರ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಸಭೆಯು ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ಜರಗಿತು. ಏಪ್ರಿಲ್ 23 ರಿಂದ 28 ರವರೆಗೆ ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಜರಗಲಿದೆ.
ನವೀನ ಭಟ್ ಕುಂಜಿರ್ಕಾನ ಇವರು ಅಧ್ಯಕ್ಷಸ್ಥಾನ ವಹಿಸಿ ಮಾಹಿತಿಗಳನ್ನಿತ್ತರು. ಕ್ಷೇತ್ರ ಪುನರ್ನಿರ್ಮಾಣ ಸಮಿತಿ ಅಧ್ಯಕ್ಷರಾದ ವಾಮನ ಆಚಾರ್ಯ ಬೋವಿಕ್ಕಾನ ಇವರು ಸರ್ವರೊಂದಾಗಿ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಕಾರ್ಯೋನ್ಮುಕ್ತರಾಗೋಣ ಎಂಬುದಾಗಿ ಕರೆಯಿತ್ತರು.
ಉಪ ಸಮಿತಿಗಳು ಸುವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಗೋವಿಂದ ಬಳ್ಳಮೂಲೆ ಮಾಹಿತಿಗಳನ್ನಿತ್ತರು. ವಿಷ್ಣು ಭಟ್ ಅಯಲ್ ಕುಂಜೆ, ಸಂಜೀವ ಪಣಂಬೂರು , ಅಪ್ಪುಟ್ಟ ಅಮ್ಮಂಗೋಡ್, ಸುಂದರ ಜಿ ವಿ , ಪದಾಧಿಕಾರಿಗಳು , ಸದಸ್ಯರು, ಮಹಿಳಾಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು. ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಗೋಳಿಯಡ್ಕ ವಿಷಯ ಮಂಡನೆ ಮಾಡಿದರು. ರಾಘವ ಪೆರಾಜೆ ಸ್ವಾಗತಿಸಿ ಗೋಪಿನಾಥ್ ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ