ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗಕ್ಕೆ 11 ರ‍್ಯಾಂಕ್

Upayuktha
0



ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಜನವರಿಯಲ್ಲಿ ನಡೆಸಿದ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆಗಳ ರ‍್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ. ಆ ಮೂಲಕ ತನ್ನ ಕಾಲೇಜಿನ 15 ಸ್ನಾತಕೋತ್ತರ ವಿಭಾಗದ 40 ವಿದ್ಯಾರ್ಥಿಗಳು ಅತ್ಯುತ್ತಮ ಮತ್ತು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಪ್ರತ್ಯೇಕ ವಿಭಾಗಗಳಲ್ಲಿ 11 ರ‍್ಯಾಂಕ್ ಪಡೆದಿರುತ್ತಾರೆ. ಒಟ್ಟು ವಿವಿಧ ವಿಭಾಗದಲ್ಲಿ ಮೂರು ಪ್ರಥಮ ರ‍್ಯಾಂಕ್, ಎರಡು ದ್ವಿತೀಯ ರ‍್ಯಾಂಕ್, ಒಂದು ಮೂರನೇ ರ‍್ಯಾಂಕ್, ಒಂದು ನಾಲ್ಕನೇ ರ‍್ಯಾಂಕ್, ಒಂದು ಐದನೇ ರ‍್ಯಾಂಕ್, ಮೂರು ಒಂಬತ್ತನೆ ರ‍್ಯಾಂಕ್ ಗಳಿಸಿದ್ದಾರೆ. 



ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಪೃಥ್ವಿ ಎನ್ ಭಟ್ ಪ್ರಥಮ ರ‍್ಯಾಂಕ್  ಪಡೆಯುವುದರ ಜೊತೆಗೆ  ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಚಿನ್ನದ ಪದಕ ವಿಜೇತರಾಗಿದ್ದಾರೆ.  ಕ್ರಿಯಾ ಶರೀರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಶೆಟ್ಟಿ ಸುಪ್ರೀತಾ ಸುಂದರ್ ಪ್ರಥಮ ರ‍್ಯಾಂಕ್ , ರಚನಾ ಶರೀರ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಸೌಮ್ಯ ಎಸ್ ಪ್ರಥಮ ರ‍್ಯಾಂಕ್  ಗಳಿಸಿದ್ದಾರೆ.  



ರೋಗನಿದಾನ ಸ್ನಾತಕೋತ್ತರ ವಿಭಾಗದಲ್ಲಿ ಡಾ.ರಶ್ಮಿ ಆರ್ ಹೆಗ್ಡೆ ದ್ವಿತೀಯ ರ‍್ಯಾಂಕ್, ಕ್ರಿಯಾ ಶರೀರ ಸ್ನಾತಕೋತ್ತರ ವಿಭಾಗದಲ್ಲಿ ಡಾ. ರಮ್ಯ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.  ಅಗದ ತಂತ್ರ  ಸ್ನಾತಕೋತ್ತರ ವಿಭಾಗದಲ್ಲಿ ಡಾ. ದೀಪಿಕಾ ಜೆ ಆರ್ ಮೂರನೇ ರ‍್ಯಾಂಕ್, ಮಾನಸ ರೋಗ ಸ್ನಾತಕೋತ್ತರ ವಿಭಾಗದಲ್ಲಿ ಡಾ. ನಿಶಾ ಸಿ ಎನ್  4ನೇ ರ‍್ಯಾಂಕ್, ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಶಿಬ್ಲಾ ಎಮ್ 5ನೇ ರ‍್ಯಾಂಕ್, ಅಗದ ತಂತ್ರ  ಸ್ನಾತಕೋತ್ತರ ವಿಭಾಗದಲ್ಲಿ ಡಾ. ಚಾಂದಿನಿ ಮಹೇಂದ್ರನ್  9ನೇ ರ‍್ಯಾಂಕ್, ಶಲ್ಯ ಸಾಮಾನ್ಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಜಾನವ್ವ ಹನಜಹಟ್ಟಿ 9ನೇ ರ‍್ಯಾಂಕ್,  ಕೌಮಾರಭೃತ್ಯ ಸ್ನಾತಕೋತ್ತರ ವಿಭಾಗದಲ್ಲಿ ಡಾ.ರಮೇಶ್ ಜಿ ಹಾಲಳ್ಳಿ 9ನೇ ರ‍್ಯಾಂಕ್ ಗಳಿಸಿದ್ದಾರೆ. 



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ ಮತ್ತು ಪ್ರಾಂಶುಪಾಲರಾದ ಡಾ.ಸಜಿತ್ ಎಂ ಸ್ನಾತಕೋತ್ತರ ವಿದ್ಯಾರ್ಥಿಗಳ ಈ ಸಾಧನೆಯನ್ನು  ಅಭಿನಂದಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top