ಲೀಲಾವತಿ ಬೈಪಾಡಿತ್ತಾಯರಿಗೆ ಅಲೆವೂರಾಯ ಪ್ರತಿಷ್ಠಾನದಿಂದ ಸನ್ಮಾನ

Upayuktha
0


ಮಂಗಳೂರು: ಯಕ್ಷಗಾನದ ಮಡಿವಂತಿಕೆಯ ಮಧ್ಯೆಯೂ ಮಹಿಳಾ ಭಾಗವತಿಕೆಯ ಕಂಪನ್ನು ಪಸರಿಸಿದ ಏಕೈಕ ಮಹಿಳೆ ಲೀಲಕ್ಕನವರು. ಹರಿನಾರಾಯಣ ಬೈಪಾಡಿತ್ತಾಯರಿಂದಲೇ ಭಾಗವತಿಕೆಯನ್ನು ಅಭ್ಯಸಿಸಿ ಅಮೋಘ ಸಾಧನೆ ಮಾಡಿದ ಪ್ರಪ್ರಥಮ ಮಹಿಳಾ ಭಾಗವತರಾಗಿ ಇತಿಹಾಸ ಸೃಷ್ಟಿಸಿದ 'ಯಕ್ಷರಂಗದಲ್ಲಿ ಕ್ರಾಂತಿಕಾರಿ ಹೆಚ್ಚೆಯಿರಿಸಿದವರು ಲೀಲಮ್ಮ. ಯಕ್ಷಗಾನವನ್ನು ಅತ್ಯಂತ ಪ್ರೀತಿಸುತ್ತಿರುವ ಲೀಲಕ್ಕನಿಗೆ ಹಲವು ಪ್ರಸಂಗಗಳು ಕಂಠಸ್ಥವಾಗಿದ್ದವು. ಅನೇಕ ಹಿರಿ-ಕಿರಿಯ ಕಲಾವಿದರ ಒಡನಾಟ ಇವರಿಗಿತ್ತು ಎಂದು ಅಲೆವೂರಾಯ ಪ್ರತಿಷ್ಠಾನದ ಗೌರವ ಸಂಚಾಲಕ ಡಾ|| ಹರಿಕೃಷ್ಣ ಪುನರೂರು ನುಡಿದರು.


ಅವರು ಅಲೆವೂರಾಯ ಪ್ರತಿಷ್ಠಾನದ ಯಕ್ಷ ತ್ರಿವೇಣಿಯ ಸಂದರ್ಭ ಲೀಲಾವತಿ ಬೈಪಾಡಿತ್ತಾಯ ಅವರನ್ನು ಸನ್ಮಾನಿಸಿ ಮಾತನಾಡಿದರು.


ಯಕ್ಷಗಾನ ಕಲಾವಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಹರಿಯಣ್ಣ ಮತ್ತು ಲೀಲಕ್ಕನವರನ್ನು ಅಭಿನಂದಿಸಿ ಅಬ್ಬಕ್ಕ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದು ಯುಕ್ಷರಂಗವನ್ನು ನಿರ್ದೇಶಿಸಿ ಆಟವಾಡಿಸಿದವರು ಲೀಲಾವತಿ ಬೈಪಾಡಿತ್ತಾಯರು. ಇವರಿಗೆ ಗೌರವಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಶರವು ಕ್ಷೇತ್ರದ ಡಾ.ಸುದೇಶ್ ಶಾಸ್ತ್ರಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶರವು ರಾಘವೇಂದ್ರ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಸುಭದ್ರಾ ದೇವಿ, ವರ್ಕಾಡಿ ಮಾಧವ ನಾವಡ ಉಪಸ್ಥಿತರಿದ್ದರು. ಸಂಘಟಕ ಸುಧಾಕರ ರಾವ್ ಪೇಜಾವರ್ ನಿರ್ವಹಿಸಿದರು. ಪ್ರತಿಷ್ಠಾನದ ವಿಶ್ವಸ್ವ ವರ್ಕಾಡಿ ರವಿ ಅಲೆವೂರಾಯ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top