ಇತಿಹಾಸ ತಿಳಿಯಲಾರದವ ಇತಿಹಾಸ ಸೃಷ್ಟಿಸಲಾರ "ಅನ್ನುವುದು ಪ್ರಚಲಿತವಾದ ಮಾತು. ಇದು ಸತ್ಯ ಕೂಡ. ಒಂದು ದೇಶವಿರ ಬಹುದು ಒಂದು ಊರಿರಬಹುದು ಒಂದು ಮನೆತನವಿರಬಹುದು ಅಲ್ಲಿನ ಪೂವಿ೯ಕರ ದುಡಿಮೆ ಸಾಧನೆ ಸುಖ ಕಷ್ಟಗಳ ಪರಿ ಜ್ಞಾನ ನಮಗೆ ತಿಳಿಯದೆ ಇದ್ದರೆ ನಮ್ಮ ಇಂದಿನ ಬದುಕಿನ ಅಸ್ತಿತ್ವದ ಮೇಲೆ ಪ್ರೀತಿ ಭರವಸೆ ಗೌರವ ಮೂಡಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಈಗ ನಿರೂಪಣೆಗೆ ಹೊರಟಿರುವುದು ನನ್ನ "ಅಜ್ಜಯ್ಯನ ಗೇೂಪುರದ ನೆನಪುಗಳು"ಅನ್ನುವ ಸುಮಾರು ಅರುವತ್ತು ವರುಷಗಳ ಹಿಂದಿನ ಕಥೆ. ಈ ಅಜ್ಜಯ್ಯನ ಗೇೂಪುರದ ಕಥೆ ನನ್ನೂರಿನ ಅಂದಿನ ಆಥಿ೯ಕ ಚಟುವಟಿಕೆಗಳನ್ನು ನೆನಪಿಸುತ್ತದೆ. ಜೊತೆಗೆ ಒಂದು ಕುಟುಂಬ ಹೇಗೆ ತನ್ನ ಊರಿನಲ್ಲಿ ನೆಲೆಗಟ್ಟು ಕಟ್ಟಿ ಕೊಳ್ಳಬಹುದು ಅನ್ನುವುದಕ್ಕೂ ಸಾಕ್ಷಿಯಾಗಿ ನಿಲ್ಲುತ್ತದೆ.
ಇದು ಸರಿ ಸುಮಾರು ಆರುವರೆ ದಶಕಗಳ ಹಿಂದಿನ ನನ್ನ ಅಜ್ಜಯ್ಯನ ಬದುಕಿನ ಕಥೆ. ಆಗ ನಾನು ಈ ಭೂಮಿಗೆ ಬಂದಿರಲಿಲ್ಲ. ಆ ಕಾಲದ ನನ್ನೂರು ಕೊಕ್ಕಣೆ೯ ಅಂದರೆ ಕೃಷಿ ಆಧರಿಸಿದ ಅಕ್ಕಿ ವ್ಯಾಪಾರದ ಪ್ರಧಾನ ಕೇಂದ್ರವಾಗಿತ್ತು. ಅಂದು ನನ್ನ ಅಜ್ಜಯ್ಯ ಸೂರ್ಯಣ್ಣ ಶೆಟ್ರು ಕೊಕ್ಕಣೆ೯ಯ ಮಧ್ಯದಲ್ಲಿ ಬಂದು ನೆಲೆಯೂರಿದೆ ಅಕ್ಕಿ ವ್ಯಾಪಾರಕ್ಕಾಗಿ. ಅದಕ್ಕಾಗಿಯೇ ಅವರು ಮೊದಲು ಪ್ರಾರಂಭಿಸಿದ್ದು ಸೂರ್ಯ ರೈಸ್ ಮಿಲ್. ಆ ಕಾಲದಿಂದಲೂ ಕೊಕ್ಕಣೆ೯ ಪರಿಸರಕ್ಕೆ ಸೀತಾನದಿ ಕೃಷಿಗೆ ಜೀವ ನದಿಯಾಗಿತ್ತು. ನಮ್ಮ ಅಜ್ಕಯ್ಯನ ಜೊತೆಗೆ ಕೆಳ ಪೇಟೆಯಲ್ಲಿ ನಾರಾಯಣರಾವ್ ರವರು ಕೂಡಾ ರೈಸ್ ಮಿಲ್ ಪ್ರಾರಂಭಿಸಿದ್ದರು. ಅನಂತರದಲ್ಲಿ ಹಲವು ರೈಸ್ ಮಿಲ್ಲುಗಳು ಹುಟ್ಟಿ ಕೊಂಡವು. ಅಂತೂ ಈ ಎಲ್ಲಾ ರೈಸ್ ಮಿಲ್ಲುಗಳಿಗೆ ಘಟದ ಮೇಲಿಂದ ಹತ್ತಾರು ಎತ್ತಿನಗಾಡಿಗಳಲ್ಲಿ ಅಕ್ಕಿ ತುಂಬಿಸಿ ಕೊಂಡು ಬಂದು ರಸ್ತೆಯ ಬದಿಯಲ್ಲಿ ಸಾಲು ಸಾಲಾಗಿ ಬಂದು ನಿಲುತ್ತಿದ್ದವು ಅನ್ನುವುದನ್ನು ಇಂದಿಗೂ ಜನ ನೆನಪಿಕೊಳ್ಳುತ್ತಾರೆ. ಆದರೆ ಯಾವಾಗ ಸೀತಾನದಿಯ ತಟದಲ್ಲೊಂದು ಸೇತುವೆ ಅವಿಷ್ಕಾರವಾಯಿತೊ ಅಂದಿನಿಂದ ಈ ಎಲ್ಲಾ ವ್ಯಾಪಾರದ ಪ್ರಧಾನ ಭೂಮಿಕೆ ಬಾಕುಾ೯ರು ಬ್ರಹ್ಮಾವರದ ಕಡೆಗೆ ತಿರುಗಿ ಬಿಟ್ಟವು..ಇದು ನಮ್ಮೂರಿನ ಅಭಿವೃದ್ಧಿಯ ಇತಿಹಾಸ.
ಈ ಅಕ್ಕಿ ಭತ್ತಗಳ ಶೇಖರಣಾ ತಾಣವಾದ ನಮ್ಮ ಅಜ್ಜಯ್ಯನ ಮನೆಗೆ "ಬಂಡ್ಸಾಲೆ "ಅನ್ನುವ ಹೆಸರು ಪ್ರಾಪ್ತವಾಯಿತು ಅನ್ನುವುದು ಅಜ್ಜಯ್ಯನ ಗೇೂಪುರ ನೆನಪಿಸುವ ನೆನಪಿನ ಕಥೆ. ನನ್ನ ಅಜ್ಜಯ್ಯನ ಹೆಸರಿನಲ್ಲಿಯೇ" ಸೂರ್ಯ" ನಿರುವ ಕಾರಣ ನನ್ನ ಹೆಸರಿಗೂ "ಸುರೇಂದ್ರ" ಅನ್ನುವ ಹೆಸರು ಸೇರಿಕೊಂಡಿತು ಅನ್ನುವುದು ಇನ್ನೊಂದು ಪ್ರತೀತಿಯೂ ಹೌದು.
ನಮ್ಮ ಅಜ್ಜಯ್ಯನವರದ್ದು ಆರು ನೂರು ಮುಡಿ ಹುಟ್ಟುವಳಿ (ಆಸ್ತಿ)ಯಂತೆ. ಈ ಸಾಮ್ರಾಜ್ಯ ಎಷ್ಟು ವಿಸ್ತಾರವಾಗಿತ್ತು ಅಂದರೆ ಕೊಕ್ಕಣೆ೯ ಆಸುಪಾಸಿನ ಊರುಗಳಾದ ಬೆನೆಗಲ್, ಸಾಸ್ತಾವು, ಹಲುವಳ್ಳಿ, ನಾಲ್ಕೂರು ಶಿರೂರು ಕೆುಾಟಂಬೈಲು..ಎಲ್ಲಾ ಕಡೆ ಅವರದ್ದೆ..ಕಾರುಬಾರು...ತುಂಬಿದ ಕುಟುಂಬದಲ್ಲಿ ಈ ಎಲ್ಲಾ ಆಸ್ತಿ ಹಂಚಿಹೇೂದ ಮೇಲೆ ..1978ರ ಇಂದಿರಾ ಗಾಂಧಿಯವರ ಭೂ ಸುಧಾರಣಾ ಕಾಯಿದೆಯಿಂದಾಗಿ ಸಾಮಾಜಿಕ ಆಥಿ೯ಕ ನ್ಯಾಯದಲ್ಲಿ ಉಳುವನೇ ಹೊಲದೊಡೆಯನ ಪಾಲಾಗಿ ಹೇೂಯಿತು ಅನ್ನುವುದು ಅಜ್ಜಯ್ಯನ ಗೇೂಪುರ ಹೇಳುವ ಸಾಮಾಜಿಕ ಆಥಿ೯ಕ ನ್ಯಾಯದ ಕಥೆ.
ಅಂತೂ ನಮ್ಮ ಅಜ್ಜಯ್ಯನ ಗೇೂಪುರ ನೆನಪಿಸುವ ಬದುಕಿನ ಶ್ರಮದ ಕಥೆಯಿಂದಾಗಿ ಅಜ್ಜಯ್ಯನ ಗೇೂಪುರದ ನೆರಳು ಇಂದು ಹೆಮ್ಮರವಾಗಿ ಬೆಳೆದು ಜಗದಗಲಕ್ಕೂ ವಿಸ್ತಾರವಾಗಿ ನಿಂತಿದೆ ಅನ್ನುವುದೇ ನಮ್ಮೆಲ್ಲರಿಗೂ ಸ್ಪೂರ್ತಿ ನೀಡುವ ಚಿಲುಮೆಯ ಕಥೆ.
-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ