ಖೋಖೋದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

Upayuktha
0



ವಿದ್ಯಾಗಿರಿ: ಕ್ಯಾಲಿಕಟ್  ವಿಶ್ವವಿದ್ಯಾಲಯದಲ್ಲಿ ಜನವರಿ 29ರಿಂದ 31ರ ವರೆಗೆ  ನಡೆದ ಅಖಿಲ ಭಾರತ  ಅಂತರ್ ವಿಶ್ವವಿದ್ಯಾಲಯಗಳ  ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ದ್ವಿತೀಯ ರನ್ನರ್ ಅಪ್ ಆಗಿದ್ದು, ಮಂಗಳೂರು ವಿಶ್ವವಿದ್ಯಾಲಯವನ್ನು  ಪ್ರತಿನಿಧಿಸಿದ 15 ಕ್ರೀಡಾಪಟುಗಳ ಪೈಕಿ 13 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. 



ಈ ಪಂದ್ಯಾವಳಿಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಪ್ರಥಮ ಸ್ಥಾನ ಪಡೆದಿದ್ದರೆ, ಔರಂಗಬಾದ್‍ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮರಥ್ವಾಡ ವಿಶ್ವವಿದ್ಯಾಲಯ ದ್ವಿತೀಯ  ಸ್ಥಾನ ಪಡೆದಿದೆ. 



ಖೇಲೋ ಇಂಡಿಯಾ: 

ಯುವ ಖೇಲೋ ಇಂಡಿಯಾ ಖೋಖೋ  ಪಂದ್ಯಾವಳಿಯು ಚೆನ್ನೈನಲ್ಲಿ ಜನವರಿ 26ರಿಂದ 30ರವರೆಗೆ ನಡೆದಿದ್ದು, ಯುವಕರ ಹಾಗೂ ಯುವತಿಯರ ವಿಭಾಗದ ರಾಜ್ಯ ತಂಡವನ್ನು  ಆಳ್ವಾಸ್ ಕಾಲೇಜಿನ ತಲಾ ಇಬ್ಬರು ವಿದ್ಯಾರ್ಥಿಗಳು ಪ್ರತಿನಿಧಿಸಿದ್ದಾರೆ.  ಯುವಕರ ತಂಡವನ್ನು ಆಳ್ವಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸಂಗೀತ್ ಗೌಡ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಮೇಶ್ ಪ್ರತಿನಿಧಿಸಿದ್ದು, ಕರ್ನಾಟಕ ತಂಡವು ತೃತೀಯ ಸ್ಥಾನ ಪಡೆದಿದೆ. ಯುವತಿಯರ ತಂಡವನ್ನು ಆಳ್ವಾಸ್ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಹಿಮಾನಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಪೂರ್ವ ಪ್ರತಿನಿಧಿಸಿದ್ದರು.


ಕರ್ನಾಟಕ ಹಾಗೂ ಮಂಗಳೂರು ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top