ಆರ್‌ಡಿಸಿಯಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮ

Upayuktha
0



ಪುತ್ತೂರು:  ನಮ್ಮ ಕಾಲೇಜಿನ ಎನ್.ಸಿ.ಸಿ  ಘಟಕದ ವಿದ್ಯಾರ್ಥಿಗಳು ಇಲ್ಲಿಯವರೆಗೆ ಹಲವು ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಅಂತಹ ಸಾಧಕಿಯರಲ್ಲಿ  ರಾಷ್ಟ್ರಮಟ್ಟದಲ್ಲಿ ಕಾಲೇಜಿನ ಹೆಸರನ್ನು ಗುರುತಿಸುವಂತೆ ಮಾಡಿದ ತೃತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ತೇಜಸ್ವಿನಿ ಒಬ್ಬಳು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು,  ಅದಕ್ಕೆ ನಮ್ಮ ಅಧ್ಯಾಪಕರು ಉತ್ತಮ ಸಹಕಾರವನ್ನು ನೀಡುತ್ತಾರೆ. ಜೊತೆಗೆ ಹೆತ್ತವರ ಸಹಕಾರವು ಇರುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಬೇಕು ಆ ಮೂಲಕ ನಮ್ಮ ಕಾಲೇಜಿಗೆ ಕೀರ್ತಿಯನ್ನು ತಂದುಕೊಡಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು.



 ಇವರು ಪುತ್ತೂರಿನ  ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )ಇಲ್ಲಿ ಎನ್.ಸಿ.ಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚನದಲ್ಲಿ ಭಾಗವಹಿಸಿದ ಕಾಲೇಜಿನ ಎನ್.ಸಿ.ಸಿ ಘಟಕದ  ಸೀನಿಯರ್ ಅಂಡರ್ ಆಫೀಸರ್ ತೇಜಸ್ವಿನಿ ವಿ ಶೆಟ್ಟಿ ಇವರ  ಅಭಿನಂದನಾ  ಕಾರ್ಯಕ್ರಮದಲ್ಲಿ ಮಾತನಾಡಿದರು.



 ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ತೇಜಸ್ವಿನಿ ವಿ ಶೆಟ್ಟಿ  ಒಂದು ಎನ್ ಸಿಸಿ ಕೆಡಿಟ್ ಗಳಿಗೆ ಆರ್ ಡಿ ಸಿ ಒಂದು ಕನಸಾಗಿರುತ್ತದೆ. ಆರ್ ಡಿಸಿಯಲ್ಲಿ ಭಾಗವಹಿಸಲು ಹಲವು ಹಂತಗಳನ್ನು ದಾಟಿ ಮುಂದೆ ಹೋಗಬೇಕು,ಇದರಲ್ಲಿ ಭಾಗವಹಿಸಿದ್ದು  ಒಂದು ಮರೆಯಲಾಗದ ಕ್ಷಣ. ನಾನು ಆರ್ ಡಿ ಸಿ ಯಲ್ಲಿ ಭಾಗವಹಿಸಿ ಯಶಸ್ಸು ಕಾಣಲು ನನಗೆ ನಮ್ಮ ಕಾಲೇಜಿನ ಎನ್.ಸಿ. ಸಿ ಅಧಿಕಾರಿ ಭಾಮಿ. ಲೆ. ಅತುಲ್ ಶೆಣೈ ಹಾಗು ಉಪನ್ಯಾಸಕರು ತುಂಬಾ ಸಹಕಾರವನ್ನು ನೀಡಿದ್ದಾರೆ ಮತ್ತು ಪೋಷಕರು ಧೈರ್ಯ ಕೊಟ್ಟಿದ್ದಾರೆ. ಸೀನಿಯರ್ ಕೆಡೆಟ್ ಹಾಗೂ ಸಹಪಾಠಿಗಳ ಬೆಂಬಲದಿಂದ ಇದು ಸಾಧ್ಯವಾಯಿತು ಎಂದರು.




 ಪೋಷಕರು  ಮಾತನಾಡಿ ತಮ್ಮ ಸಂತಸವನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ.ಹೆಚ್ ಜಿ ಶ್ರೀಧರ್, ಐಕ್ಯೂಎಸಿ ಘಟಕದ ಸಂಯೋಜಕ  ಪ್ರೊ. ಶಿವ ಪ್ರಸಾದ್ ಕೆ ಎಸ್ ,   ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ , ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ, ಕಲಾವಿಭಾಗದ ಡೀನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸಿ ದುರ್ಗಾರತ್ನ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಸೂರ್ಯನಾರಾಯಣ ಪಿ.ಎಸ್, ಸುಚಿತ್ರ, ಹೇಮಾ ಸುಭಾಷಿಣಿ, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ತೇಜಸ್ ಜಿ ವಿ ಮತ್ತು ಪೋಷಕರಾದ ವಿವೇಕಾನಂದ ಶೆಟ್ಟಿ ಮತ್ತು ಮಮತಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂತಿಮ ಕಲಾವಿಭಾಗದ ವಿದ್ಯಾರ್ಥಿನಿ ಚೈತನ್ಯ ಲಕ್ಷ್ಮಿ ನಿರ್ವಹಿಸಿದರು.




ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ ಸೀನಿಯರ್ ಅಂಡರ್ ಆಫೀಸರ್ ತೇಜಸ್ವಿನಿ ವಿ ಶೆಟ್ಟಿ ಇವರನ್ನು ಪುತ್ತೂರಿನಿಂದ ಕಾಲೇಜಿನ ಆವರಣಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಎನ್ ಸಿಸಿ ಪಥಸಂಚಲನ ಮತ್ತು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳ ಬ್ಯಾಂಡ್ ಪಾರ್ಟಿ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಎನ್ ಸಿಸಿ ಕೆಡೆಟ್ ತೇಜಸ್ವಿನಿ ವಿ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top