ಶ್ರೀ ಕುರು ಅಂಬಾ ದೇವಸ್ಥಾನಕ್ಕೆ ಪರ್ಯಾಯ ಪುತ್ತಿಗೆ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಭೇಟಿ

Upayuktha
0


ಮಂಗಳೂರು: ಉಡುಪಿ ಶ್ರೀಕೃಷ್ಣ ಪೂಜಾ ಕೈಂಕರ್ಯವನ್ನು ನಿಭಾಯಿಸಲು ಪರ್ಯಾಯ ಪೀಠಾರೋಹಣಗೈಯ್ಯಲಿರುವ ಪುತ್ತಿಗೆ ಮಠದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರು ಪುರ ಪರ್ಯಟನಾ ಪ್ರಯುಕ್ತ ಕಲ್ಬಾವಿ ಶ್ರೀ ಕುರು ಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಳಕ್ಕೆ ಇಂದು ಮಧ್ಯಾಹ್ನ 12 ಗಂಟೆಗೆ ಚಿತ್ತೈಸಿದರು. ದೇವಳದ ಆಡಳಿತ ಮೊಕ್ತೇಸರ ಪಿ.ಮಹಾಬಲ ಚೌಟ, ಅರ್ಚಕ ರವೀಶ ಭಟ್ ಶಾಸ್ತ್ರೋಕ್ತವಾಗಿ ಬರಮಾಡಿಕೊಂಡರು.


ಉಳಿದ ಟ್ರಸ್ಟಿಗಳು, ಊರ ಸಮಸ್ತ ಭಕ್ತ ಜನತೆ ಶ್ರೀಗಳನ್ನು ಪೂರ್ಣಕುಂಭ, ಚೆಂಡೆ ಮೇಳ 'ಭಜನಾ ತಂಡದೊಂದಿಗೆ ದೇವಳದ ಆನೆ ಬಾಗಿಲಿನವರೆಗೆ ಮೆರವಣಿಗೆಯಲ್ಲಿ ದಾರಿಯುದ್ಧಕ್ಕೂ ಹೂ ಚೆಲ್ಲಿ ಸ್ವಾಗತಿಸಿದರು. ನಂತರ ಶ್ರೀಗಳು ಶೀರಾಜರಾಜೇಶ್ವರಿ ಅಮ್ಮನವರಿಗೆ ಮಂಗಳಾರತಿ ಬೆಳಗಿದರು.



ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಚೌಟರು ಪರ್ಯಾಯ ಶ್ರೀಗಳನ್ನೂ ಮೊಕ್ತೇಸರರನ್ನು ಸ್ವಾಗತಿಸಿದರು. ದೇವಳದ ವತಿಯಿಂದ ಶ್ರೀಮತಿ ಅನಸೂಯಾ ಎಂ. ಚೌಟ ಹಾಗೂ ಮಹಾಬಲ ಬೌಟ ದಂಪತಿಗಳು ಗೌರವಿಸಿದರು. ಹರೀಶ್ ಕಲ್ಬಾವಿ,  ರಮೇಶ ನಾಯಕ್, ಪುಷ್ಪರಾಜ್ ಶೆಟ್ಟಿ, ವಿದ್ಯಾ ಜಿ ರಾವ್, ಜಾಹ್ನವಿ ರಮೇಶ್ ಶೆಟ್ಟಿ ಸಹಕರಿಸಿದರು. 


ಶ್ರೀಕೃಷ್ಣ ಸಂದೇಶವನ್ನು ಜಗತ್ತಿಗೇ ಸಾರುವುದು ನಮ್ಮ ಉದ್ದೇಶ ಆ ಮೂಲಕ ಸನಾತನ ಹಿಂದೂ ಧರ್ಮದ ಉತ್ಥಾನ ಸಾಧ್ಯ. ಇದನ್ನು ಪ್ರತಿಯೋರ್ವನೂ ಅರಿತಾಗ ಧರ್ಮ ಉಳಿಯುತ್ತದೆ. ಅಲ್ಲದೇ ನಾವು ಈ ಬಾರಿಯ ಪರ್ಯಾಯವನ್ನು ಗೀತೆಯ ಮಹತ್ವವನ್ನು ಸಾರುವುದಕ್ಕಾಗಿ ವಿಶ್ವ ಗೀತಾ ಪರ್ಯಾಯ ಎಂದು ಹೆಸರಿಟ್ಟಿದ್ದೇವೆ. ಕೋಟಿ ಕೋಟಿ ಭಕ್ತರು ಈ ಕೋಟಿ ಗೀತಾ ಯಜ್ಞದಲ್ಲಿ ಭಾಗವಹಿಸಿ ಭಗವದನುಗ್ರಹಕ್ಕೆ ಪಾತ್ರರಾಗುತ್ತಾರೆ. ಎಲ್ಲರಿಗೂ ಒಳಿತಾಗಲಿ ಎಂದು ಶ್ರೀಗಳು ಅನುಗ್ರಹ ಸಂದೇಶವನ್ನಿತ್ತರು.


ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ  ನಿರ್ವಹಿಸಿದರು. ಟ್ರಸ್ಟಿ ಡಾ. ಉಮ್ಮಪ್ಪ ಪೂಜಾರಿಯವರು ಧನ್ಯವಾದವಿತ್ತರು. ಜಗದೀಪ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top