ಶಿವಮೊಗ್ಗ : ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಶಿವಮೊಗ್ಗ, ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ, ಮಾನಸಾಧಾರ ಟ್ರಸ್ಟ್, ಶಿವಮೊಗ್ಗ ಹಾಗೂ ಈಶಾನ್ಯ ಇಂಡಿಯಾ ಫೌಂಡೇಶನ್, ಬೆಂಗಳೂರು, ಇವರ ಸಂಯುಕ್ತಾಶ್ರಯದಲ್ಲಿ "ವಿವಿಧ ನ್ಯೂನ್ಯತೆಗಳು ಮತ್ತು ಚಿಕಿತ್ಸಕ ಕಾರ್ಯಕ್ರಮಗಳ" ತರಬೇತಿ ಕಾರ್ಯಾಗಾರವನ್ನು ವಿಶೇಷ ಸಂಪನ್ಮೂಲ ವ್ಯಕ್ತಿಗಳಿಗಾಗಿ ಎರಡು ದಿನಗಳ ಕಾಲ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾನಸ ಸಂಸ್ಥೆಯ ನಿರ್ದೇಶಕ ಡಾ.ರಜನಿ.ಎ.ಪೈಯವರು ಉದ್ಘಾಟಕರಾಗಿ ಭಾಗವಹಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರತಿಯೊಬ್ಬ ವಿಶೇಷ ಶಿಕ್ಷಕರು ಸಮಯ ಪ್ರಜ್ಞೆ ಮತ್ತು ಲಭ್ಯ ಸಂಪನ್ಮೂಲಗಳೊಂದಿಗೆ ಕಾರ್ಯಾಗಾರದ ಭಾಗವಹಿಸುವಿಕೆಯ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಾಸ್ತಾವಿಕ ನುಡಿಯನ್ನು ಡಯಟ್ ನ ಹಿರಿಯ ಉಪನ್ಯಾಸಕ ಡಾ.ಹರಿಪ್ರಸಾದ್ ರವರು ಮಾಡಿದರು. ಮತ್ತು ಮುಖ್ಯ ಅತಿಥಿಗಳಾಗಿ ಈಶಾನ್ಯ ಇಂಡಿಯ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸ್ವಾತಿ ವೆಲ್ಲಾಲ್ ರಘು ನಂದನ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ಶಿವಮೊಗ್ಗದ ಉಪನಿರ್ದೇಶಕ (ಅಭಿವೃದ್ಧಿ) ಹಾಗೂ ಪ್ರಾಂಶುಪಾಲ ಬಿ.ಆರ್.ಬಸವರಾಜಪ್ಪ ವಹಿಸಿಕೊಂಡಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶೇಷ ಶಿಕ್ಷಕರಿಗೆ ಈ ರೀತಿಯ ಕಾರ್ಯಾಗಾರದ ಅಗತ್ಯತೆಯನ್ನು ಒತ್ತಿ ಹೇಳಿ, ಇಂತಹ ಕಾರ್ಯಾಗಾರಗಳು ಸಮಾಜದ ಉತ್ತಮ ಬೆಳವಣಿಗೆಗೆ ಹಾಗೂ ಬದಲಾವಣೆಗೆ ಸಹಕಾರಿ. 'ಅಂಗವಿಕಲ' ಪದದ ಬಳಕೆ ಸಲ್ಲ. ಮಗುವಿನ ಪ್ರಗತಿಗೆ ಕಾರ್ಯಾಗಾರದ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಹಿತವಚನ ನುಡಿದರು.
ಕಾರ್ಯಾಗಾರದಲ್ಲಿ ನಿರೂಪಣೆಯನ್ನು ಶಿವಮೊಗ್ಗ ತಾಲೂಕಿನ ಬಿ ಐ ಇ ಆರ್ ಟಿ ಶಕುಂತಲಾ ಮಾಡಿದರು. ಸ್ವಾಗತವನ್ನು ಶಿವಮೊಗ್ಗ ತಾಲೂಕಿನ ಬಿ ಐ ಇ ಆರ್ ಟಿ ಮಂಜಯ್ಯ ಮಾಡಿದರು. ವಂದನಾರ್ಪಣೆಯನ್ನು ಭದ್ರಾವತಿ ತಾಲೂಕಿನ ಬಿ ಐ ಇ ಆರ್ ಟಿ ಪ್ರತಿಭಾರವರು ಮಾಡಿದರು. ಈ ಕಾರ್ಯಕ್ರಮದಲ್ಲಿ ಡಯಟ್ ನ ಎಲ್ಲಾ ಉಪನ್ಯಾಸಕ ವರ್ಗದವರು ಹಾಗೂ ಈಶಾನ್ಯ ಇಂಡಿಯಾ ಫೌಂಡೇಶನ್ ನ ತರಬೇತುದಾರರು, ಮನಸ್ಫೂರ್ತಿ ಕಲಿಕಾ ಕೇಂದ್ರದ ಸಂಯೋಜಕರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


