ವಿದ್ಯಾಭಾರತಿ ರಾಷ್ಟ್ರ ಮಟ್ಟದ ಜ್ಞಾನ ವಿಜ್ಞಾನ ಮೇಳ – ವಿವೇಕಾನಂದ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಆಪ್ತ ಚಂದ್ರಮತಿ ಮುಳಿಯ ದ್ವಿತೀಯ

Upayuktha
0



ಪುತ್ತೂರು : ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಡಿ.8ರಿಂದ 10ರವರೆಗೆ ಮಧುರೈಯ ಶ್ರೀಜಿ ಬಾಬಾ ಸರಸ್ವತಿ ವಿದ್ಯಾಮಂದಿರದಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕøತಿ ಮಹೋತ್ಸವ – 2023; ಕಥಾಕಥನ ಸ್ಪರ್ಧೆಯಲ್ಲಿ ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್‍ನ ವಿದ್ಯಾರ್ಥಿನಿ ಆಪ್ತ ಚಂದ್ರಮತಿ ಮುಳಿಯ ಬಾಲವರ್ಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪುತ್ತೂರಿನ ಖ್ಯಾತ ಸ್ವರ್ಣೋದ್ಯಮಿ ಕೇಶವ ಪ್ರಸಾದ ಮುಳಿಯ ಹಾಗೂ ಕೃಷ್ಣವೇಣಿ ಮುಳಿಯ ದಂಪತಿ ಪುತ್ರಿ. ಶಾಲಾ ಶಿಕ್ಷಕಿ ಜಯಶ್ರೀ ಆರ್. ಭಟ್ ಮಾರ್ಗದರ್ಶನದಲ್ಲಿ, ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಈ ಉನ್ನತ ಸಾಧನೆಯನ್ನು ಮಾಡಿರುತ್ತಾರೆ. 




إرسال تعليق

0 تعليقات
إرسال تعليق (0)
To Top