ಉಡುಪಿ: ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತನ್ನ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ರಶ್ಮಿ ಅಮ್ಮೆಂಬಳ ಅವರನ್ನು ಗುರುತಿಸಿ ಪುರಸ್ಕರಿಸಿದೆ.
ಡಾ.ರಶ್ಮಿ ಅಮ್ಮೆಂಬಳ ಅವರು ಪತ್ರಿಕೋದ್ಯಮ, ಸಮಾಜಶಾಸ್ತ್ರ, ತುಳುವಿನಲ್ಲಿ ಸ್ನಾತಕೋತ್ತರ ಪದವಿ, ಎಂ.ಪಿಲ್ ಪದವಿ ಮಾತ್ರವಲ್ಲದೆ ಸಮುದಾಯ ಬಾನುಲಿಯಲ್ಲೇ ಕಾರ್ಯನಿರ್ವಹಿಸಿ ಸಮುದಾಯ ಬಾನುಲಿ ಸಂಬಂಧ ಪಿಹೆಚ್. ಡಿ ಪದವಿಯನ್ನು ಪೂರೈಸಿದ್ದು ದೇಶದಲ್ಲಿಯೇ ಮೊದಲಿಗರಾಗಿದ್ದಾರೆ.
ಪತ್ರಿಕೋದ್ಯಮ, ಸಾಹಿತ್ಯ, ಶಿಕ್ಷಣ, ಸಮಾಜಸೇವೆಯಲ್ಲಿ ವಿಶೇಷ ಅನುಭವ ಹೊಂದಿದ್ದಾರೆ. ಸಮಾಜ ಪರ ಕಾಳಜಿಯೊಂದಿಗೆ ತೆರೆಮರೆಯಲ್ಲಿದ್ದು ರಕ್ತದ ಬೇಡಿಕೆಯುಳ್ಳವರಿಗೆ ನೆರವು ನೀಡುವುದು, ಮಾಸಾಶನ, ವಿಧವಾ ವೇತನ ಸೇರಿದಂತೆ ಅಗತ್ಯವುಳ್ಳವರಿಗೆ ಸಹಾಯಹಸ್ತ ನೀಡುವುದನ್ನು ಪ್ರಮುಖ ಹವ್ಯಾಸವನ್ನಾಗಿಸಿಕೊಂಡಿದ್ದಾರೆ.
ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಸಂಯೋಜಕರಾಗಿ ಮಾಹೆ ಯ ಸಮುದಾಯ ಬಾನುಲಿ ರೇಡಿಯೊ ಮಣಿಪಾಲದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಇವರ 30 ಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಜರ್ನಲ್ಸ್ ನಲ್ಲಿ ಪ್ರಕಟಗೊಂಡಿವೆ. ಅಲ್ಲದೆ ಇವರ 3 ಪುಸ್ತಕಗಳು ಪ್ರಕಟಣೆಗೆ ಸಿದ್ದಗೊಂಡಿವೆ. ಪ್ರಸ್ತುತ ಕರ್ನಾಟಕ ಸಮುದಾಯ ಬಾನುಲಿ ಸಂಘದ ಸ್ಥಾಪಕಾಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ