ಎರಡು ವರಗಳು, ಎರಡೇ ವರಗಳು; ಬಳಕೆ ಮತ್ತು ದುರ್ಬಳಕೆ

Upayuktha
0

ರ, ದೇವರು ಪ್ರಸನ್ನನಾದಾಗ ಮನೋಕಾಮನೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ. ಆ ಈಡೇರಿಕೆಯ ಪ್ರಕ್ರಿಯೆಗೆ ತಪಸ್ಸು, ಸಾಧನೆ ಎಂದು ಹೆಸರು. ಈಡೇರಿದ ಕಾಮನೆಗಳನ್ನು ವರಗಳು ಎನ್ನಬಹುದೇನೋ.


ಮುನಿಗಳು ತಪಸ್ಸು ಮಾಡುವುದು ದೈವಸಾಕ್ಷಾತ್ಕಾರಕ್ಕಾಗಿ. ರಾಕ್ಷಸರು ವರಬೇಡುವುದು ಬಲಕ್ಕಾಗಿ, ಅಮರತ್ವಕ್ಕಾಗಿ. ಆದರೆ terms and conditions ಮಾತ್ರ ಇಬ್ಬರಿಗೂ ಒಂದೇ. ಅದು ದೈವವನ್ನು ಕಠಿಣ ತಪಸ್ಸಿನಿಂದ ಮೆಚ್ಚಿಸಬೀಕು. ಇದಕ್ಕಾಗಿ ನಮ್ಮ ಪುರಾಣ ಪುಣ್ಯಕಥೆಗಳಲ್ಲಿ ಸಾವಿರಾರು ಉದಾಹರಣೆಗಳು.


ಈಗ ನಾನು ಹೇಳಹೊರಟಿರುವ ವರದ ವ್ಯಾಖ್ಯಾನವೂ ರಾಮಾಯಣಕ್ಕೆೇ ಸಂಬಂಧಿಸಿದ್ದು. ಆದರೆ ವರಗಳ ನೀಡುವಿಕೆ, ಕೇಳುವಿಕೆ ಮಾತ್ರ ಬೇರೆಬೇರೆ. ಸಂದರ್ಭಕ್ಕೆ ತಕ್ಕಂತೆ.



ದಶರಥನ ಪತ್ನಿಯರಲ್ಲಿ ಕೈಕೇಯಿ ಬಹಳ ಚತುರೆ. ಆಡಳಿತದಲ್ಲಿ ಯಾವಾಗಲೂ ದಶರಥನಿಗೆ ಸಲಹೆ ಕೊಡವಷ್ಟು ಬುದ್ಧಿವಂತಳು. ಯುದ್ಧಕಲೆಯಲ್ಲಿಯೂ, ರಥ ಸಾರಥ್ಯದಲ್ಲಿಯೂ ಪರಿಣಿತಳು. ಪಕ್ಕಾ ಕ್ಷತ್ರಿಯ ಕನ್ಯೆ./ಮಹಿಳೆ. ದಶರಥನ ಪ್ರೇಮದರಸಿ. ಒಮ್ಮೆ ದೇವಾಸುರ ಯುದ್ಧದಲ್ಲಿ ದೇವತೆಗಳ ಸಹಾಯಕ್ಕಾಗಿ ದಶರಥ ಹೋಗುತ್ತಾನೆ. ಆಗ, ಅವನೊಡನೆ ಕೈಕೇಯಿ ರಥಸಾರಥಿಯಾಗಿ ಹೋಗುತ್ತಾಳೆ.


ಭಯಂಕರ ಯುದ್ಧ ನಡೆಯುವಾಗ, ದಶರಥನ ರಥದ ಚಕ್ರದ ಕಡಾಣಿ, ಕೀಲು ಮುರಿದು ಹೋಗುತ್ತದೆ. ಆಗ, ಕೈಕೇಯಿ, ಆ ಜಾಗಕ್ಕಿ ತನ್ನ ಬೆರಳನ್ನಿಟ್ಟು ರಥವನ್ನು ನಡೆಸುತ್ತಾಳೆ. ಯುದ್ಧದ ಬಳಿಕ, ದಶರಥ ನೋಡುತ್ತಾನೆ. ಕೈಕೇಯಿಯ ಬೆರಳು ರಕ್ತಸಿಕ್ತ. ಅವಳ ದೈರ್ಯ ಮತ್ತು ಸಮಯಪ್ರಜ್ಞೆಗಳನ್ನು ಮೆಚ್ಚಿದ ದಶರಥನಿಗೆ ಸಂತೋಷವಾಗುತ್ತದೆ. ಕೈಕೇಯಿಗೆ ಎರಡು ವರಗಳನ್ನು ಕೇಳಲು ಹೇಳುತ್ತಾನೆ.

ಕೈಕೇಯಿ, ಈಗ ಬೇಡ. ಮುಂದೆ ನೋಡುವ ಎನ್ನತ್ತಾಳೆ. ಇದೇನು ಹೊಸಕತೆಯಲ್ಲ. ಎಲ್ಲರಿಗೂ ತಿಳಿದಿರುವ ವಿಷಯವೇ ಅಲ್ಲವೇ ಎನ್ನಬಹುದು ನೀವು. ಸ್ವಲ್ಪ ಸಹನೆಯಿರಲಿ.


ಮುಂದೆ ರಾಮನ ಪಟ್ಟಾಭಿಷೇಕದ ಸಮಯ. ಮಂಥರೆಯ brainwash. Etc etc,,

ಕೈಕೇಯಿ ಹಿಂದೆ pending ಇಟ್ಟಿದ್ದ ಎರಡು ವರಗಳ ಬೇಡಿಕೆ ಇಡುತ್ತಾಳೆ.

1. ರಾಮ ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು.

2. ಭರತನಿಗೆ ಪಟ್ಟಾಭಿಷೇಕವಾಗಬೇಕು.


ದಶರಥನಿಗೆ ಇಕ್ಕಟ್ಟಿನ ಪರಿಸ್ಥಿತಿ. ಕೈಕೇಯಿಯ ಹಟವೇ ಮೇಲಾದಾಗ, ಬೇಸತ್ತು ನೀನು ನನ್ನ ಹೆಂಡತಿಯೇ ಅಲ್ಲ. ಭರತ ನನ್ನ ಮಗನೇ ಅಲ್ಲ ಅಂದು ಬಿಡುತ್ತಾನೆ. ದು:ಖದಲ್ಲಿಯೇ ಜೀವ ಬಿಡುತ್ತಾನೆ. ಹಾಗಾಗಿ, ದಶರಥನ ಅಂತ್ಯಕ್ರಿಯೆಗಳನ್ನೆಲ್ಲಾ ಮಾಡುವುದು ಶತ್ರುಘ್ನ. ಕಾಲಚಕ್ರ ಉರುಳಿತು. ರಾವಣನ ಸಂಹಾರವಾಯ್ತು. ಸೀತೆಯುು ಅಗ್ನಿಪರೀಕ್ಷೆಗೊಳಗಾದಾಗ, ಸುತ್ತಲಿದ್ದವರೆಲ್ಲರಿಗೂ ಸಂಕಟ. ದೇವತೆಗಳು ಸ್ವರ್ಗದಲ್ಲಿದ್ದ ದಶರಥನನ್ನು ಕರೆಯುತ್ತಾರೆ. ದಶರಥ ಸೀತೆಗೆ ಅಗ್ನಿ ಪರೀಕ್ಷೆಯು ಅವಳನ್ನು ಪುಟವಿಟ್ಟ ಚಿನ್ನದಂತೆ ಪವಿತ್ರೀಕರಿಸುತ್ತದೆ. ಭಯಪಡಬೇಡ ಎಂದು ಧೈರ್ಯ ತುಂಬುತ್ತಾನೆ. ಅಂತೆಯೇ ಅಗ್ನಿಪ್ರವೇಶ ಮಾಡಿ, ಶುದ್ಧಳಾಗುತ್ತಾಳೆ ಸೀತೆ.


ಈಗ, ದಶರಥನಿಗೆ ರಾಮನತ್ತ ಗಮನ. ಲೋಕಕಂಟಕನಾಗಿದ್ದ ರಾವಣನನ್ನು ಗೆದ್ದ ವೀರ ತನ್ನ ಮಗ ರಾಮ.ಇಕ್ವಾಕು ವಂಶದ ಹೆಸರನ್ನು ಉಳಿಸಿದ ರಣಧೀರ. ಲೋಕೋತ್ತರ ಮರ್ಯಾದಾಪುರುಷ. ಮನತುಂಬಿ ಬಂದು, ರಾಮಲಕ್ಷ್ಮಣರನ್ನು ಪ್ರೀತಿಯಿಂದ ಆಲಿಂಗಿಸಿಕೊಳ್ಳುತ್ತಾನೆ.


ಹುಟ್ಟುಗುಣ ಸುಟ್ಟರೂ ಹೋಗದಂತೆ. ಸಂತೃಪ್ತಿಯ ಭಾವದಲ್ಲಿ ರಾಮನಿಗೆ ಎರಡು ವರಗಳನ್ನು ಕೇಳಲು ಹೇಳುತ್ತಾನೆ ದಶರಥ. ರಾಮ , ದಶರಥರಾಮ. ಸೀತಾರಾಮ. ಈಗ ರಾವಣನ ಸಂಹಾರಮಾಡಿ, ಗೆದ್ದ ವಿಜೇತ ರಾಮ. ತಂದೆಯನ್ನು ಸಂಕೋಚದಿಂದ ಕೇಳುತ್ತಾನೆ. ಅಪ್ಪಾ, ನಾನು ಕೇಳುವ ಎರಡು ವರಗಳು ನಿಮಗೆ ಬೇಸರ ತರಿಸಬಹುದು.


ನೀವು,ಇಹಲೋಕ ತ್ಯಜಿಸುವ ಮುನ್ನ ತಿರಸ್ಕರಿಸಿದ್ದ ದೈವೀಸ್ವರೂಪದ ಸ್ತ್ರೀಯನ್ನು, ಮತ್ತು ಅವರ ಮಗನನ್ನು ಕ್ಷಮಿಸಬೇಕು. ಅವರ ಜೊತೆಗಿನ ಸಂಬಂಧವನ್ನು ಮತ್ತೆ ಊರ್ಜಿತ ಮಾಡಬೇಕು. ಚಿಕ್ಕಮ್ಮನೆಂದು ಬಾಯಿಬಿಟ್ಟು ಹೇಳುವಂತಿಲ್ಲ.  ಏಕೆಂದರೆ ಸಾಯುವ ಮುನ್ನ ಕೈಕೇಯಿಯನ್ನು ಹೆಂಡತಿಯಲ್ಲವೆಂದಿದ್ದ .ಅವಳನ್ನೇ ದೂರ ಮಾಡಿದ ಮೇಲೆ ಇನ್ನು ಭರತ ಯಾವ ಮಗನ ಲೆಕ್ಕ?


ದಶರಥ ಇಂಗಿತಜ್ಞ. ರಾಮ ಕೇಳುತ್ತಿರುವುದು ಅವನಿಗೆ ಅರ್ಥವಾಯಿತು. ಕೈಕೇಯಿಯನ್ನು ಕ್ಷಮಿಸಿ, ಮತ್ತೆ ಅವಳನ್ನು ಪತ್ನಿಯಾಗಿ ಸ್ವೀಕರಿಸಿದ. ಭರತನನ್ನು ಪುತ್ರನೆಂದು ಸಮ್ಮತಿಸಿದ.


ಪ್ರತಿಯೊಬ್ಬರಲ್ಲಿಯೂ ಒಳ್ಳೆಯದನ್ನೇ ಕಾಣುವ ರಾಮನ ಮನಸೇ ಸುಮನಸು. ಅದುವೇ ರಾಜಧರ್ಮ. ರಾಮಧರ್ಮವೂ ಹೌದು.


ಜೈ ಶ್ರೀ ರಾಮ್

ಶ್ರೀರಾಮ ಜಯರಾಮ ಜಯಜಯರಾಮ


- ಮೀನಾಕ್ಷಿ ಮನೋಹರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top