ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಕಾರ್ಯಾಗಾರ

Upayuktha
0



ಶಿವಮೊಗ್ಗ : ಮನಸ್ಫೂರ್ತಿ ಕಲಿಕಾ ಕೇಂದ್ರ, ಮಾನಸ ಟ್ರಸ್ಟ್, ಶಿವಮೊಗ್ಗ ಹಾಗೂ ಈಶಾನ್ಯ ಇಂಡಿಯಾ ಫೌಂಡೇಶನ್, ಬೆಂಗಳೂರು ಇವರ ಸಹಯೋಗದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರಿಗಾಗಿ "ಬೌದ್ಧಿಕ ಮತ್ತು ಬೆಳವಣಿಗೆಯ ಹಂತಗಳು, ವಿಕಲತೆ" ಈ ವಿಷಯದ ಕುರಿತು ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. 



ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಎ.ರಜನಿ ಪೈಯವರು ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ವಿವರಿಸುತ್ತಾ, ಪುಟ್ಟ ಮಕ್ಕಳ ಸಮಸ್ಯೆಯನ್ನು ಗುರುತಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರದ ಬಗ್ಗೆ ವಿಶ್ಲೇಷಿಸಿದರು. 



ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ವಿದ್ಯಾ ಪೈಯವರು ಜೀವನದಲ್ಲಿ ಧ್ಯಾನದ ಮಹತ್ವವನ್ನು ತಿಳಿಸಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಧ್ಯಾನದ ಅಭ್ಯಾಸವನ್ನು ಮಾಡಿಸಬೇಕೆಂದು ಕರೆ ಕೊಟ್ಟರು. 



ಡಾ.ಪುಷ್ಪಲತಾರವರು ಮಾತನಾಡುತ್ತಾ, ಮಕ್ಕಳ ಸಮಸ್ಯೆಯ ಬಗ್ಗೆ ತಿಳಿದು ಪೋಷಕರ ಗಮನಕ್ಕೆ ತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ ಎಂದು ಅಭಿಪ್ರಾಯಪಟ್ಟರು. 



ರೂಪ ಲಕ್ಷ್ಮೀಯವರು ಮಾತನಾಡಿ ಕಾರ್ಯಾಗಾರದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ನೀಡುವ ಸಲಹೆಗಳು ಮುಂದಿನ ಕಾರ್ಯಕ್ರಮಗಳಿಗೆ ದಾರಿ ದೀಪವೆಂದು ತಿಳಿಸಿದರು. 



 ರಂಗನಾಯಕಿಯವರು ಮಾತನಾಡಿ ಸಮಸ್ಯೆಯನ್ನು ಗುರುತಿಸಿ ಮನಸ್ಫೂರ್ತಿ ಕಲಿಕಾ ಕೇಂದ್ರಕ್ಕೆ ಕಳುಹಿಸಿದಲ್ಲಿ ಸಾಧ್ಯವಾದಷ್ಟು ಸಮಸ್ಯಾ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು. 



 ನಾಗರತ್ನ ಪ್ರಾರ್ಥಿಸಿದರು,  ಗೀತಾ ಸ್ವಾಗತಿಸಿದರು.  ಲತಾ ನಿರೂಪಿಸಿದರು. ಗಂಗಮ್ಮ ವಂದನಾರ್ಪಣೆಯನ್ನು ಮಾಡಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top