ಬೆಂಗಳೂರು: ಶುಭಶ್ರೀ ಭಟ್ಟ ಅವರು ಬರೆದ ‘ಇಹದ ತಳಹದಿ’ ಕೃತಿ ಬಿಡುಗಡೆ ಕಾರ್ಯಕ್ರಮವು ಜ.27 ಶನಿವಾರ ಸಂಜೆ 5.30 ಕ್ಕೆ ನಾಣಿ ಅಂಗಳ, ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಫೌಂಡೇಶನ್ 36, 9 ನೇ ಮುಖ್ಯರಸ್ತೆ, ಬಿ.ವಿ.ಕಾರಂತ ರಸ್ತೆ ಬನಶಂಕರಿ ಬೆಂಗಳೂರಿನಲ್ಲಿ ನಡೆಯಲಿದೆ.
ಶುಭಶ್ರೀ ಭಟ್ಟ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಪ್ರಸ್ತುತ ಶೃಂಗೇರಿಯಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ಸಾಫ್ಟ್‍ವೇರ್ ಇಂಜಿನೀಯರ್ ಆಗಿರುವ ಇವರಿಗೆ ಸಾಹಿತ್ಯದ ಮೇಲೆ ಅಪಾರ ಒಲವು. ಇವರ ಲೇಖನಗಳಲ್ಲಿ ವಿಶೇಷವಾಗಿ ಸೆಳೆಯುವುದು ಭಾಷೆ, ಬರವಣೆಗೆಯ ಶೈಲಿ. ಪ್ರತಿಯೊಂದು ಲೇಖನವೂ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಹದವಾದ ನಿರೂಪಣೆ, ತೀವ್ರ ಭಾವಾಭಿವ್ಯಕ್ತಿ ಎಲ್ಲವನ್ನೂ ಸಮತೂಕದಲ್ಲಿ ಬೆರೆಸಿ ಬರೆಯುವ ಇವರ ವ್ಯವಧಾನ ಓದುಗರಿಗೆ ಒಂದು ಚೆಂದದ ಓದನ್ನು ಕೊಡುತ್ತದೆ.
‘ಇಹದ ತಳಹದಿ’ ಪುಸ್ತಕವು ನಮ್ಮ ದೈನಂದಿನ ಬದುಕಿನಲ್ಲಿ ಘಟಿಸುವ, ತಾನು ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಎಲ್ಲವೂ ಉದಾಹರಣೆಯಾಗಿ, ನಂತರ ಅದರಲ್ಲೇ ಒಂದು ನೀತಿಯೂ ಅಡಕವಾಗಿ, ಕೊನೆಗೆ ಬದುಕಿಗೊಂದು ಸ್ಫೂರ್ತಿಯಾಗಿ ಬದಲಾಗುತ್ತದೆ. ಶುಭಶ್ರೀಯವರ ಈ ಸಂಕಲನದ ಪ್ರಬಂಧಗಳಿಗೆ ಎರಡು ಮುಖ್ಯ ಲಕ್ಷಣಗಳಿವೆ. ಇದು ಅಂತರಂಗದ ಕಥನವೂ ಹೌದು ಅದರ ಜೊತೆಗೆ ಬಹಿರಂಗದ ಕಥನವೂ ಹೌದು. ಕೆಲವೆಡೆ ಅಂತರಂಗ ಮತ್ತು ಬಹಿರಂಗ ಎಂಬ ದ್ವಂದ್ವಗಳನ್ನು ಮೀರಿದ ಕಥನ ಕೂಡ ಹೌದು.
ವಿಶ್ವವಾಣಿಯಲ್ಲಿ ಪ್ರಕಟವಾದ ಅಂಕಣಗಳ ಸಂಗ್ರಹವಾದ “ಇಹದ ತಳಹದಿ” ಪುಸ್ತಕದಲ್ಲಿ ಪ್ರಸಿದ್ದ ಕವನಗಳ ಸಾಲುಗಳನ್ನಾಧರಿಸಿ ಅದನ್ನು ಯುವ ಪೀಳಿಗೆಯ ಮೇಲೆ ಪರಿಣಾಮಕಾರಿಯಾಗುವಂತೆ ಬರೆದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


