ಮಂಗಳೂರು: ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆಯ ಪ್ರಯುಕ್ತ ನಗರದ ಬಿಜೈಯಲ್ಲಿನ ಹೊರಿಜಾನ್ ಹೈಟ್ಸ್ ಎಂಬ ವಸತಿ ಸಮುಚ್ಛಯದಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮದೇವರ ಪೂಜೆ, ಮಕ್ಕಳಿಂದ ರಾಮಾಯಣದ ಪಾತ್ರಗಳ ವೇಷಗಳ ಮೆರವಣಿಗೆ ಕುಣಿತ ಭಜನೆ ಹಾಗೂ ಯಕ್ಷಗುರು ರವಿ ಅಲೆವೂರಾಯ ವರ್ಕಾಡಿ, ಯವರ ನೇತೃತ್ವದಲ್ಲಿ ದಾಶರಥಿದರ್ಶನ ಎಂಬ ಬಯಲಾಟವೂ ಜರಗಿತು. ಹಿಮ್ಮೇಳದಲ್ಲಿ ಶ್ರೀ ದೇವಿ ಪ್ರಕಾಶ್ ರಾವ್, ಶಿವಪ್ರಸಾದ್ ಪುನರೂರು, ಮಧುಸೂದನ ಅಲೆವೂರಾಯ ಇದ್ದರು. ಪಾತ್ರಧಾರಿಗಳಾಗಿ ವಿಜಯಲಕ್ಮೀ ಎಲ್. 'ಅದ್ವಿತ್ ಪಿ, ನೀಲವ್ವ ಮತ್ತು ವರ್ಕಾಡಿಯವರು ಇದ್ದರು. ಸಂಘಟಕ ದಿನೇಶ್ ರಾವ್, ಮತ್ತು ಇನ್ನಿತರ ಪದಾಧಿಕಾರಿಗಳು, ಹಾಗೂ ಎಲ್ಲಾ ನಿವಾಸಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


