ಆರಾಮನಾಗು... ವಿರಾಮನಾಗು || ಪಲ್ಲ ||
ಸಾಮಗಾನದಲ್ಲಿ ರಾಮನಾಮ ಕಾಣದೆ |
ಲಂಕೆಗೊಡೆಯ ಶಾಂತಿಭಂಗದಿಂದ ಕೊರಗಿದ ||
ರಾಮನಾಗಲಿಲ್ಲ ಅವನ ತಂದೆ ದಶರಥ |
ನೆಮ್ಮದಿಯನೆ ಕಳೆದುಕೊಂಡು ಜೀವ ನೀಗಿದ||೧||
ರಾಮನರಸಿ ಸೀತೆಗಾದ ದುರಿತವೇನದು |
ಸೀಮೆದಾಟಿ ಕಾಡಿನಲ್ಲಿ ಸಹನೆ ಮೆರೆದಳು ||
ತಮ್ಮ ಲಕ್ಷ್ಮಣಾಂಕ ರಾಮನೊಡನೆ ನಡೆದನು |
ನೇಮ ನಿಷ್ಠೆಯಿಂದ ಜಗದಿ ಮಾನ್ಯ ನಾದನು||೨||
ದಾಸನಾದ ಮಹಾಂತನಾದ ವೀರಮಾರುತಿ |
ರಾಮನಂತೆ ನಿತ್ಯನಾದ ಭಕ್ತವೃಂದದಿ ||
ಭರತ ತನ್ನ ಭರಿತ ಗುಣದಿ ರಾಮನಾದನೆ
ರಾಜನಾಗಿ ವಿರಾಗನಾದ ಭವದ ಬಾಳಲಿ||೩||
ಶಬರಿ ಗುಹ ವಿಭೀಷಣಾಂಕ ಶರಣ ಸುಗ್ರೀವ |
ರಾಮನನ್ನೆ ನಂಬಿ ಲೋಕ ವಂದ್ಯರಾದರು ||
ಪ್ರೇಮದಿಂದ ರಾಮಕಥೆ ಹಾಡಿ ಕುಶಲವ |
ರಾಮಾಯಣ ಕಾವ್ಯ ಮೆರೆಸಿ ಅಮರರಾದರು||೪||
- ಭಾಸ್ಕರ ರೈ ಕುಕ್ಕುವಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


