ಗೋವಿಂದದಾಸ ಕಾಲೇಜಿನಲ್ಲಿ ರಾಮನಾಮ ಸುಗಿಪುಗ ಮತ್ತು ಅಯ್ಯಪ್ಪಸ್ವಾಮಿ ತುಳು ಭಕ್ತಿಗೀತೆಗಳು ಬಿಡುಗಡೆ

Upayuktha
0



ಸುರತ್ಕಲ್ :  “ ಥಂಡರ್ ಕಿಡ್ಸ್ “ ಮಕ್ಕಳ ತಂಡ ಮಂಗಳೂರು  ನಿರ್ಮಿಸಿರುವ, ಎಲ್ಲೂರು ಶ್ರೀನಿವಾಸರಾವ್ ಸಂಗೀತ ನಿರ್ದೇಶನ ಮಾಡಿರುವ, ಮಮತಾ ಅಂಚನ್ ಪುಣೆ  ಇವರ ಸಾಹಿತ್ಯದ ರಾಮನಾಮ ಸುಗಿಪುಗ  ಮತ್ತು ಅಯ್ಯಪ್ಪ ಸ್ವಾಮಿ ತುಳು ಭಕ್ತಿಗೀತೆಗಳ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ಜ.15ರಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ನೆರವೇರಿತು.




ಮಂಗಳೂರು ನಗರ ಪಾಲಿಕೆಯ ಮಾಜಿ ಉಪಮೇಯರ್  ಸುಮಂಗಳ ರಾವ್ ಕೇದಿಗೆ ಮತ್ತು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ  ಉಪ ಪ್ರಾಂಶುಪಾಲರಾದ ಪ್ರೊ. ದೇವಪ್ಪ ಕುಳಾಯಿ ಭಕ್ತಿ ಗೀತೆಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪಿ ಕೃಷ್ಣಮೂರ್ತಿ ವಹಿಸಿದ್ದರು.




 ಸುಮಂಗಳ ರಾವ್ ರವರು ಮಾತನಾಡಿ “ ಮಕ್ಕಳಲ್ಲಿ ಸಂಗೀತದ ಅಭಿರುಚಿ ಮೂಡಿಸಿ ಅವರಲ್ಲಿ ಸಾಂಸ್ಕೃತಿಕ ಎಚ್ಚರವನ್ನು ರೂಪಿಸುವ ಕಾರ್ಯ ಶ್ಲಾಘನೀಯವಾದದು. ಸಂಗೀತದ ಕಲಿಕೆಯ ಮೂಲಕ ಮಕ್ಕಳಲ್ಲಿ ಏಕಾಗ್ರತೆ ವೃದ್ಧಿಸಿ ಜ್ಞಾನದ ವಿಕಾಸಕ್ಕೂ ದಾರಿಯಾಗುತ್ತದೆ “ ಎಂದು ನುಡಿದು ಶುಭ ಹಾರೈಸಿದರು.




 ಮುಖ್ಯಅತಿಥಿಯಾಗಿ ಪಾಲ್ಗೊಂಡ ಪ್ರೊ.ದೇವಪ್ಪ ಕುಳಾಯಿ  ಅವರು ಮಾತನಾಡಿ “ ಮಕ್ಕಳ ಪಠ್ಯಗಳಲ್ಲಿರುವ ಕವಿತೆಗಳನ್ನು ರಾಗ ಸಂಯೋಜಿಸಿ ಮಕ್ಕಳಿಗೆ ತಲುಪಿಸುವ ಮೂಲಕ ಮಕ್ಕಳಲ್ಲಿ ಸಂಗೀತದ ಸಾಹಿತ್ಯದ ಆಸಕ್ತಿಯನ್ನು ರೂಪಿಸಬೇಕಾಗಿದೆ “ಎಂದು ನುಡಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಪಿ. ಕೃಷ್ಣಮೂರ್ತಿ ಅವರು ಮಾತನಾಡಿ  “ ಕೇವಲ ಪಠ್ಯದ ಓದನ್ನೇ ಪ್ರಧಾನವಾಗಿಸುತ್ತಿರುವ ಇಂದಿನ ದಿನಗಳಲ್ಲಿ  ಹೆತ್ತವರು ಸಂಗೀತ ಸಾಹಿತ್ಯ ಸಾಂಸ್ಕೃತಿಕ ವಾದ ವಿಚಾರಗಳ ಕಡೆಯು ಮಕ್ಕಳನ್ನು ಸೆಳೆದು ರೂಪಿಸಬೇಕಾದ ತುರ್ತು ಅಗತ್ಯವಿದೆ. ಹತ್ತನೇ ತರಗತಿಯ ನಂತರವೂ ಮಕ್ಕಳಲ್ಲಿ ಪಠ್ಯೇತರ  ಚಟುವಟಿಕೆಗಳು ವೃದ್ಧಿಸುವಂತೆ ಪ್ರೋತ್ಸಾಹಿಸಬೇಕಾಗಿದೆ “ಎಂದು ನುಡಿದರು.




 ಹಾಡನ್ನು ಥಂಡರ್ ಕಿಡ್ಸ್ ನ ಮಕ್ಕಳಾದ  ಅನನ್ಯ ನಾರಾಯಣ್, ಪ್ರದ್ಯುಮ್ನ,  ರಾಶಿ ಯು ಶೆಟ್ಟಿ, ಸುಜ್ಞಾನ ,  ವಿಹಾನ್ವಿ,   ವಿನಮ್ರ ಇಡ್ಕಿದು,  ನಿನಾದ, ರಾಶಿ ದೇವಾಡಿಗ, ಮನು,  ಕೊಳಲು: ಶುಶಾಂತ್ ಭಟ್ , ರಿದಂ ಪ್ಯಾಡ್ :ಸಿದ್ದಾರ್ಥ್ಅಡಿಗ ,  ಕೀಬೋರ್ಡ್: ಸ್ವಸ್ತಿಕ್ ಭಟ್, ವೀಣೆ:  ಐಶ್ವರ್ಯ,  ತಬಲ ಆದ್ಯ ಮತ್ತು ಗಗನ್ ಅಮೀನ್,  ವರ್ಷ.  ಹಾರ್ಮೋನಿಯಂ ತ್ರಿಶಾ ವೈ ಪೂಜಾರಿ ಸಜೀಪ, ತಾಳ: ಆದ್ಯ 




 ಚಿತ್ರೀಕರಣ:  ರಿತೇಶ್. ಎ ಮತ್ತು ಕವಿತಾ ದೇವಾಡಿಗ,  ದೃಶ್ಯ ಪರಿಕಲ್ಪನೆ ಮತ್ತು ಸಂಕಲನ : ವಿದ್ಯಾ ಯು,    ರೆಕಾರ್ಡಿಂಗ್, ಮಾಸ್ಟರಿಂಗ್ : ಮಹಮ್ಮದ್ ಫಯಾಜ್, ಸೌಂಡ್ ವೇವ್ ಸ್ಟುಡಿಯೋ ಮಂಗಳೂರು.ನಿರ್ವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ತಂಡದ ನಿರ್ದೇಶಕರಾದ ಎಲ್ಲೂರು ಶ್ರೀನಿವಾಸ ರಾವ್ ಸ್ವಾಗತಿಸಿ ಧನ್ಯವಾದಗಳು. ತಂಡದ ಕಾರ್ಯದರ್ಶಿ ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top