ಪುತ್ತೂರು: ಮುಳಿಯ ಶಾಮ್ ಭಟ್ ಹಾಗೂ ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣನಾರಾಯಣ ಮುಳಿಯ ಅವರ ಪಾಂಗಳಾಯಿಯಲ್ಲಿರುವ ಶ್ಯಾಮಲೋಚನ ಮನೆಯಲ್ಲಿ ಪುತ್ತಿಗೆ ಶ್ರೀಗಳಿಗೆ ತುಳಸಿಮಾಲೆ ಹಾಕಿ ಸ್ವಾಗತಿಸಿದರು.
ಸ್ವಾಮಿಗಳು ಪಾದಪೂಜೆ ಸ್ವೀಕರಿಸಿ ಕೋಟಿಗೀತಾ ಯಜ್ಞ ದೀಕ್ಷೆ ನೀಡಿ ಆಶೀರ್ವಾದ ಮಾಡಿ ಹರಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ರವಿ ನಾರಾಯಣ, ಕೋಕೋ ಗುರು ಸಂಸ್ಥೆಯ ಸಂತೋಷ ಬೋನಂತಾಯ, ಶಿವಳ್ಳಿ ಸಂಘದ ಅಧ್ಯಕ್ಷರಾದ ದಿವಾಕರ ನಿಡ್ವಣ್ಣಾಯ, ಕಾರ್ಯದರ್ಶಿಯಾದ ಭಾಸ್ಕರ ಬಾರ್ಯ, ಮುಳಿಯ ಕಾವೇರಮ್ಮ, ಮುಳಿಯ ಶಾಮ್ ಭಟ್, ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, ಇನ್ನರ್ ವೀಲ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಕೋಟಿಗೀತಾ ಯಜ್ಞದ ಕೆ. ವೆಂಕಟರಮಣ ಆಚಾರ್ಯ ಹಾಗೆಯೇ ಮುಳಿಯ ಕುಟುಂಬಸ್ಥರು ಮತ್ತು ಮುಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ದೀಕ್ಷೆ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ