ಮೂಡಂಬೈಲು: ಪುಣಚಾ ಗ್ರಾಮದ ಮೂಡಂಬೈಲಿನಲ್ಲಿರುವ ಶ್ರೀ ಗೋಪಾಲಕೃಷ್ಣ ದೇವರ ಮಠದಲ್ಲಿ ಜೀರ್ಣೋದ್ಧಾರ ಕೆಲಸ ಆರಂಭಗೊಂಡಿದ್ದು ಇತ್ತೀಚೆಗೆ ಶ್ರೀ ಮಹಿಷಮರ್ದಿನಿ ಭಜನಾಮಂದಿರದ ವೈಭವೀ ಕಲಾಭವನದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈಯವರ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು.
ಈ ದೇವಾಲಯವು ಸುಮಾರು 300 ವರ್ಷಗಳ ಹಿಂದೆ ಕಾಶೀ ನಿವಾಸಿಗಳಾದ ಶ್ರೀ ಮನ್ನಾರಾಯಣಾನಂತ ಸ್ವಾಮಿಗಳಿಂದ ಸ್ಥಾಪಿತವಾಗಿದೆ. ಊರವರೆಲ್ಲರ ಸಹಭಾಗಿತ್ವದೊಂದಿಗೆ ನೂರಿನ್ನೂರು ವರ್ಷಗಳ ಮುಂದಾಲೋಚನೆಯಿಟ್ಟುಕೊಂಡು ಮಠದ ಜೀರ್ಣೋದ್ಧಾರ ಕೆಲಸ ನಡೆಯಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಸಲಹೆ ನೀಡಿದರು.
ಸಮಿತಿಯ ಗೌರವಾಧ್ಯಕ್ಷರಾದ ಪುಣಚ ಎಸ್ ಆರ್ ರಂಗಮೂರ್ತಿ ಜೀರ್ಣೋದ್ಧಾರದ ಮುಂದಿನ ರೂಪುರೇಷೆ ಬಗ್ಗೆ ಮಾರ್ಗದರ್ಶನ ಮಾಡಿದರು. ಅಧ್ಯಕ್ಷರಾದ ನೀರ್ಕಜೆ ಜಯಶ್ಯಾಮ ಸಮಿತಿಯ ಜವಾಬ್ದಾರಿ, ಪದಾಧಿಕಾರಿಗಳ ಪಟ್ಟಿಯನ್ನು ಉಲ್ಲೇಖಿಸಿದರು. ಮುರಲೀಧರ ಶಾಸ್ತ್ರಿ ಪ್ರಾರ್ಥನೆಗೈದರು. ಗೋಕುಲ ರಾಮಕೃಷ್ಣ ಶಾಸ್ತ್ರಿ ಪ್ರಸ್ತಾವನೆ ಮಾಡಿದರು. ರಾಮಕೃಷ್ಣ ಬಿ ನಿರೂಪಿಸಿದರು. ನಡುಮನೆ ಈಶ್ವರ ಶಾಸ್ತ್ರಿ ಸ್ವಾಗತಿಸಿದರು. ಪುಣಚ ಪಂಚಾಯತ್ ಅಧ್ಯಕ್ಷೆ ಬೇಬಿ, ಉದಯಕುಮಾರ್ ದಂಬೆ, ಎಂ ಎಸ್ ಮೊಹಮ್ಮದ್, ಸಮಿತಿಯ ಕಾರ್ಯಾಧ್ಯಕ್ಷ ದೊಡ್ಡಮನೆ ರಾಜೇಶ್ವರ ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯನಿರ್ವಾಹಕ ಜಯಕೃಷ್ಣ ಶಾಸ್ತ್ರಿ ಧನ್ಯವಾದಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


