ದೇವರಿಗೆ ಅರ್ಪಣೆಯಾಗುವ ನೀನು
ಬಾಗಿಲ ಮುಂದೆ ಸಂಸ್ಕೃತಿ ತಿಳಿಸುವೆ
ತಲೆಯ ಬಾಗಿ ನಡೆಯುವೆ ನಾನು
ಹಸಿರ ಚಿಗುರಿನೊಳು ಬೆಳೆದು ನಿಲ್ಲುವೆ
ದೀಪದ ಕಿರಣವ ಹಿಡಿದು ನಗುವೆ
ರೋಗ ರುಜಿನಕ್ಕೆ ನಾಂದಿಯು ನೀನು
ಹಿಡಿ ಮಣ್ಣು ನೀರು ಸಾಕೆನ್ನುವೆ
ಹೆಣ್ಣಿಗೆ ನಾಮಧೇಯವಾಗುವೆ ನೀನು
ಸೂರ್ಯನ ಕಿರಣಕ್ಕೆ ನೀ ದೂರ ಸರಿವೆ
ಮುಟ್ಟುವ ಕೈ ಚಲಕವು ನಾಚುತ್ತಿಹುದು
ನೋಡುಗರ ಕಣ್ಣಿಗೆ ರೋಮಾಂಚನಕಾರಿಯಾಗಿರುವೆ
ಆಯಸ್ಸಿನಲ್ಲಿ ಶ್ರೇಷ್ಠ ಪಟ್ಟ ನಿನ್ನದು
ಕಣ್ಣಿಗೆ ಕಾಣುವ ದೇವರಾಗಿ ನಿಂತಿರುವೆ
ಬುದ್ಧಿಶಕ್ತಿಗಾಗಿ ನಿನ್ನ ಬಳಸುವೆ ನಾನು
ಶುಭಕಾರ್ಯಕ್ಕೆ ಎಂದು ಆಶೀರ್ವಾದಿಸುವೆ
ಕಷ್ಟವ ಹೇಳಿ ಸುತ್ತುವನು ನಂಬಿಕಸ್ತನು
- ಪೂರ್ಣಿಮಾ ಕೆ ಮುಂಡುಗಾರು.
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ
ಪುತ್ತೂರು ಪತ್ರಿಕೋದ್ಯಮ ವಿದ್ಯಾರ್ಥಿನಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ