ಆಳ್ವಾಸ್‍ನ ವರ್ಧಿತ ಜಲಜನಕ ಇಂಧನ ಕೋಶ’ ಕ್ಕೆ ಪೇಟೆಂಟ್ ಅನುಮೋದನೆ

Upayuktha
0

ಸುಸ್ಥಿರ ಭವಿಷ್ಯಕ್ಕಾಗಿ ಕ್ರಾಂತಿಕಾರಿ ಇಂಧನ: ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಿಂದ ‘ವರ್ಧಿತ ಜಲಜನಕ ಇಂಧನ ಕೋಶ’



ಮೂಡುಬಿದಿರೆ: ‘ವರ್ಧಿತ ಜಲಜನಕ ಇಂಧನ ಕೋಶ’ (ಹೈಡ್ರೋಜನ್ ಫ್ಯುಯೆಲ್ ಸೆಲ್- ಎಚ್‍ಎಫ್‍ಸಿ) ತಂತ್ರಜ್ಞಾನಕ್ಕಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೊದಲ ಪೇಟೆಂಟ್ ಪಡೆದಿದ್ದು, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಾರಥ್ಯದಲ್ಲಿ ಪ್ರಾಧ್ಯಾಪಕ ಡಾ.ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಆವಿಷ್ಕಾರವು ಸಾಕಾರಗೊಂಡಿದೆ.  




ಪ್ರಾಧ್ಯಾಪಕ ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕರಾದ ಪ್ರೀತಮ್ ಕ್ಯಾಸ್ಟೆಲಿನೊ, ಜಯರಾಮ ಅರಸಳಿಕೆ, ಸತ್ಯನಾರಾಯಣ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಸೋಹನ್ ಪೂಜಾರಿ, ಸನ್ನಿ ರಾಮ್ನಿವಾಸ್ ಶರ್ಮಾ, ಪ್ರಶಾಂತ್ ಶೇಖರ್ ಪೂಜಾರಿ ಮತ್ತು ಚಿರಾಗ್ ಸತೀಶ್ ಪೂಜಾರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.  



 

ಈ ಪೇಟೆಂಟ್ (ಪೇಟೆಂಟ್ ಸಂಖ್ಯೆ -201941035383) ನಾವಿನ್ಯ ಆವಿಷ್ಕಾರವಾಗಿದ್ದು, ‘ಆಲ್ಟ್ರಾ ವಯಲೆಟ್ ಕಿರಣಗಳಿಗೆ ಅತ್ಯುತ್ತಮವಾಗಿ ತೆರೆದುಕೊಂಡ ನೆಫಿಯಾನ್ ಎಂಬ ಪೊರೆಯ ವರ್ಧಿತ ಕಾರ್ಯಕ್ಷಮತೆ ನೀಡುವ ಜಲಜನಕ ಇಂಧನ ಕೋಶ’ ವಾಗಿದೆ. (ಹೈಡ್ರೋಜನ್ ಫ್ಯುಯೆಲ್ ಸೆಲ್ಸ್ ಹ್ಯಾವಿಂಗ್ ಎನ್‍ಹ್ಯಾನ್ಸ್‍ಡ್ ಫರ್ಮಾರೆನ್ಸ್ ವಿದ್ ನಫೀಯಾನ್ ಪ್ರೊಟಾನ್ ಎಕ್ಸ್‍ಚೇಂಜ್ ಮೆಂಬ್ರೇನ್ ಆಪ್ಟಿಮಲ್ ಎಕ್ಸ್‍ಪೋಸ್ಡ್ ಟು ಆಲ್ಟ್ರಾವಯಲೆಟ್ ರೇಸ್). 




ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಈ ಸಂಶೋಧನಾತ್ಮಕ ಹೆಜ್ಜೆಯು ಸುಸ್ಥಿರ ಇಂಧನ ಅಭಿವೃದ್ಧಿಯಲ್ಲಿ ಬಹುದೊಡ್ಡ ದಾಪುಗಾಲಾಗಿದೆ. ಪ್ರಸ್ತುತ ಸಾಂಪ್ರದಾಯಿಕ ಜಲಜನಕ ಇಂಧನ ಕೋಶಗಳಿಗೆ ಹೋಲಿಸಿದರೆ, ದುಪ್ಪಟ್ಟು ವಿದ್ಯುತ್ ಶಕ್ತಿ ನಿರ್ಮಾಣ ಮಾಡುವ ಸಾಮಾಥ್ರ್ಯ ಹೊಂದಿದೆ. ಇದಲ್ಲದೆ ಈ ತಂಡವು ಸೌರ ಶಕ್ತಿಯಿಂದ ಜಲಜನಕದ ಉತ್ಪಾದನೆ ಹಾಗೂ ಸಂಗ್ರಹಿಸುವ ಮಾರ್ಗಗಳನ್ನು ಅನ್ವೇಷಣೆಯತ್ತ ತೊಡಗಿದೆ. ಜಲಜನಕದ ಉತ್ಪಾದನೆ, ಶೇಕರಣೆ ಹಾಗೂ ಇಂಧನ ಕೋಶದ ತಂತ್ರಜ್ಞಾನದಿಂದ ವಿದ್ಯುತ್ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಸಲು ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಬನ್ ಮುಕ್ತ ಇಂಧನವಾಗಿ ಬಳಸಹುದು. 




ಐಐಟಿಬಿ(ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ) ಮತ್ತು ಟಿಐಎಫ್‍ಆರ್ (ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ) ಜೊತೆಗಿನ ಸಹಯೋಗದಲ್ಲಿ ಅಲ್ಲಿನ ತಜ್ಞರಾದ ಸಿದ್ಧಾರ್ಥ ಪ್ರಕಾಶ್ ದುತ್ತಗುಪ್ತ ಮತ್ತು ಶ್ರೀ ಗಣೇಶ್ ಪ್ರಭು ಸಹಕಾರದಲ್ಲಿ ಆವಿಷ್ಕಾರವನ್ನು ಉನ್ನತೀಕರಿಸಲಾಗಿದೆ. 




ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ತಂತ್ರಜ್ಞಾನದ ಪರಿವರ್ತನೆಗಾಗಿ ಈ ಆಧುನೀಕರಿಸಿದ ಜಲಜನಕ ಇಂಧನ ಕೋಶ ತಂತ್ರಜ್ಞಾನವನ್ನು ನೀಡಲು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಬದ್ಧವಾಗಿದೆ. ಈ ಆವಿಷ್ಕಾರವು ಪಳೆಯುಳಿಕೆ ಇಂಧನದ ಅಭಿವೃದ್ಧಿಯಲ್ಲಿ ಸುಸ್ಥಿರ ಪರ್ಯಾಯವಾಗಿದ್ದು, ಇದನ್ನು ಅಳವಡಿಸಿಕೊಳ್ಳಲು ಹಾಗೂ ಸೇರ್ಪಡೆಗೊಳಿಸಲು ಕಾರ್ಪೊರೇಟ್‍ಗಳಿಗೆ ಮುಕ್ತ ಆಹ್ವಾನವನ್ನು ನೀಡುತ್ತಿದ್ದೇವೆ. 




ಪರಿಸರ ಸ್ನೇಹಿ ಇಂಧನ ಶಕ್ತಿಯನ್ನು ಉತ್ತೇಜಿಸುವ ಸಂಸ್ಥೆಯ ಬದ್ಧತೆಯ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅವರ ಸಕ್ರಿಯ ಹಾಗೂ ನಿರಂತರ ಬೆಂಬಲದಿಂದ ಆವಿಷ್ಕಾರವು ಸಾಕಾರಗೊಂಡಿದೆ. 




ಈ ಅತ್ಯಾಧುನಿಕ ತಂತ್ರಜ್ಞಾನವನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ  ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವರ ಸುಸ್ಥಿರ ಮತ್ತು ಪರಿಸರ ಸ್ನೇಹಿ ದೃಷ್ಟಿಕೋನಕ್ಕೆ ಅನುಗುಣವಾಗಿ ಗಣನೀಯ ಕೊಡುಗೆ ನೀಡಲು ಸಹಕಾರಿಯಾಗಲಿದೆ.  




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top