ಧೀಮಂತ ಚೇತನಗಳನ್ನು ನೆನೆದುಕೊಳ್ಳಬೇಕಾದುದು ನಮ್ಮ ಹೊಣೆ: ಟಿ. ಮಂಜುನಾಥ್ ಗಿಳಿಯಾರು

Upayuktha
0



ಉಡುಪಿ: ಸೀಮಿತವಾಗಿಯಾದರೂ ಸಮಾನತೆ ಹಾಗೂ ಸಮಾನ ಅವಕಾಶಗಳೊಂದಿಗೆ ನಮ್ಮ ಹಿರೀಕರಿಗಿಂತ ಭಿನ್ನವಾಗಿ ಅಕ್ಷರ ಲೋಕದ ಒರತೆಯನ್ನು ಎದೆಗಿಳಿಸಿಕೊಳ್ಳುತ್ತಾ ಕೂಡಿಬಾಳಲು ಸಾಧ್ಯವಾದ ಈ ವರ್ತಮಾನದ ಬದುಕು ಹಾಗೂ ಸಾಮಾಜಿಕ ಸುಸ್ಥಿತಿಯ ಹಿಂದಿನ ಕಾರಣ ಮತ್ತು ಕಾರಣಿಕರುಗಳ ಸಾಲಿನಲ್ಲಿ ನಿಲ್ಲುವ ಅಕ್ಷರದ ಅವ್ವ, ಅರಿವಿನ ತಾಯಿ, ಈ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಾ ಬಾಪುಲೆ ಹಾಗೂ ಅವರ ಒಡನಾಡಿ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ತರಹದ ಧೀಮಂತ ಚೇತನಗಳನ್ನು ಅರ್ಥಪೂರ್ಣವಾಗಿ ನೆನೆದುಕೊಳ್ಳುತ್ತಾ ವೈಚಾರಿಕವೂ, ಮಾನವೀಯವೂ ಆದ ಭವಿಷ್ಯದ ಸಮಾಜವನ್ನು ಕಟ್ಟಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ನ್ಯಾಯವಾದಿ  ಟಿ.ಮಂಜುನಾಥ್ ಗಿಳಿಯಾರು ಹೇಳಿದರು. 




ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ‘ಅರಿವಿನ ತಾಯಿ ಸಾವಿತ್ರಿ ಬಾಪುಲೆ’ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಉಪನ್ಯಾಸ ನೀಡಿದರು.  




ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿಯವರು ಅಕ್ಷರವಿಲ್ಲದ ಅನಂತ ಕತ್ತಲೆಯಲ್ಲಿ ಅಳಿದು ಹೋದ ಅಸಂಖ್ಯ ಶಂಭೂಕ ಸರಣಿಯ ಕೊಂಡಿಗಳು ಕಳಚಿಕೊಂಡ ಹೊಸಕಾಲದ ಅರಿವಿನ ಫಲಾನುಭವಿಗಳಾದ ಯುವಮನಸ್ಸುಗಳು ಪುಲೆ ದಂಪತಿಗಳ ಬದುಕಿನ ಹೋರಾಟದ ಚರಿತ್ರೆಯನ್ನು ಎಚ್ಚರದಿಂದಲೇ ನೆನೆಯಬೇಕು ಎಂದರು.  




ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಸಂವಿಧಾನದ ಪೀಠಿಕೆಯ ಓದಿನೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಉಪನ್ಯಾಸಕಿ ಶರೀತಾ ವಂದಿಸಿ, ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ನಿರೂಪಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top