ಉಡುಪಿ: ಜಿಸಿಐ ಉಡುಪಿ ಸಿಟಿ ವತಿಯಿಂದ 'ರಾಷ್ಟ್ರೀಯ ಯುವ ದಿನಾಚರಣೆ'ಯನ್ನು ಕ್ರಿಶ್ಚಿಯನ್ ಪಿಯು ಕಾಲೇಜ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ರೋಟರಿ ಪರ್ಕಳ ಐಸಿರಿಯ ಅಧ್ಯಕ್ಷೆ ಸ್ಮಿತಾ ಕೆ ಪಾಟೀಲ್, ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಬಗ್ಗೆ, ನಮಗೆಲ್ಲ ಸ್ವಾಮಿ ವಿವೇಕಾನಂದರು ಯಾಕೆ ಆದರ್ಶವಾಗಬೇಕು? ಮತ್ತು ಈ ರಾಷ್ಟ್ರೀಯ ಯುವ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದರ ಸ್ಮರಣೆಯಲ್ಲಿ ಯಾಕೆ ಆಚರಿಸುತ್ತೇವೆ? ಎನ್ನುವುದರ ಬಗ್ಗೆ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ಈ ದಿನದ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾರತೀಯ ಮಾನವ ಹಕ್ಕುಗಳ ಫೆಡರೇಶನ್ ಕಾರ್ಯಕಾರಿ ನಿರ್ದೇಶಕ ಉದಯ ನಾಯ್ಕ್, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಒಂದು ಉತ್ತಮ ಪ್ರಜೆಯಾಗಬೇಕು ಎಂದು ತಿಳಿಸಿದರು.
ಜಿಸಿಐ ಉಡುಪಿ ಸಿಟಿಯ ಅಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ, ಮಾತನಾಡಿ 'ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು, ಎಲ್ಲವೂ ನಮ್ಮ ಮನೋಬಲ ಆದರಿತ. ಸರಿಯಾದ ರೀತಿಯಲ್ಲಿ ನಮ್ಮ ಮನಃಶಕ್ತಿಯನ್ನು ಉಪಯೋಗಿಸಿಕೊಂಡರೆ ಸಕಲವನ್ನೂ ಸಾಧಿಸಬಹುದು' ಎಂದರು.
ಜೆಸಿಐ ಉಡುಪಿ ಸಿಟಿಯ ನಿಕಟ ಪೂರ್ವ ಅಧ್ಯಕ್ಷ ಕಿರಣ್ ಭಟ್ ಮಾತನಾಡಿ 'ನ್ಯಾಷನಲ್ ಯೂತ್ ಡೇ ಅನ್ನು ನಮ್ಮ ದಿನವೆಂದು ಅಂದುಕೊಂಡು ನಾವು ಬಹಳ ಸಂಭ್ರಮದಿಂದ ಆಚರಿಸಬೇಕು ಮತ್ತು ಇದರ ಮಹತ್ವವನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ ಶುಭ ಹಾರೈಸಿದರು.
ಕಾರ್ಯದರ್ಶಿ ಸಂಧ್ಯಾ ಕುಂದರ್ ವoದಿಸಿದರು. ಜೆಸಿಐ ಉಡುಪಿ ಸಿಟಿಯ ಸದಸ್ಯರುಗಳಾದ ಉಷಾಕುಮಾರಿ, ಶರತ್ ಕುಮಾರ್ ಶೆಟ್ಟಿಗಾರ್, ನಿಶಾ, ದಿಶಾ ಮುಂತಾದವರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ