ಬಂಟ್ವಾಳ: ಪೆರಾಜೆ ಗ್ರಾಮ ಪಂಚಾಯತ್ ನ ವಠಾರದಲ್ಲಿ "ಕೂಸಿನ ಮನೆ"ಯ ವಿಧ್ಯುಕ್ತ ಉದ್ಘಾಟನೆಯನ್ನು ವಿವೇಕಾನಂದ ಜಯಂತಿಯಂದು ಪೆರಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಕುಶಲ ಎಂ. ಪೆರಾಜೆ ನೆರವೇರಿಸಿದರು.
ಹಿರಿಯರಾದ ಬಿ. ಟಿ. ನಾರಾಯಣ ಭಟ್ ಮಕ್ಕಳ ಆಟದ ಕೊಠಡಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಪೆರಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ರೈ ಪಾನೂರು, ಮಮತಾ ಕುಮಾರಿ, ರಾಜಾರಾಮ ಕಾಡೂರು, ಪಿ. ಡಿ.ಒ. ಶಂಭು ಕುಮಾರ ಶರ್ಮಾ, ಕಾರ್ಯದರ್ಶಿ ನಾರಾಯಣ ನಾಯ್ಕ, ಶಿಶು ಪುಟಾಣಿ ಮಕ್ಕಳು, ಪೋಷಕರು, ಪಂಚಾಯತ್ ಸಿಬ್ಬಂದಿ ಯವರು, ಪತ್ರಕರ್ತರಾದ ಜಯಾನಂದ ಪೆರಾಜೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ