ಬಾಗಲಕೋಟೆ: ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಜನವರಿ 6 ಮತ್ತು 7 ರಂದು ಬಾದಾಮಿಯ ಎಸ್. ಎಫ್ ಹೊಸಗೌಡ್ರ ವರ್ಲ್ಡ್ ಸ್ಕೂಲ್ ಆವರಣದಲ್ಲಿ ನಡೆಯಲಿರುವ ಬಾದಾಮಿ ಚಾಲುಕ್ಯ ಉತ್ಸವ ನಿಮಿತ್ಯವಾಗಿ ಇಂದು ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಮೇಘಮೈತ್ರಿ ಕನ್ನಡ ರಥಯಾತ್ರೆ ಹೊರಟಿದೆ.
ಈ ರಥಯಾತ್ರೆಯನ್ನು ಕೆ. ಪಿ.ಸಿ. ಸಿ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಹಾಗೂ ಕನ್ನಡಪರ ಹೋರಾಟಗಾರರು ಮತ್ತು ವಕೀಲರಾದ ರಮೇಶ ಬದ್ನುರ್ ಕನ್ನಡ ಧ್ವಜ ಹಾರಿಸಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿ ಕನ್ನಡ-ನಾಡು ಬಗ್ಗೆ ಯುವಕರಲ್ಲಿ ಜ್ಞಾನ ಹೆಚ್ಚಬೇಕು, ನೆಲ, ಜಲ, ಭಾಷೆಯ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡುವ ಮನೋಭಾವ ಹೊಂದಬೇಕು ಅಷ್ಟೇ ಅಲ್ಲದೆ ರಮೇಶ ಕಮತಗಿ ಮಾಡುತ್ತಿರುವ ಕನ್ನಡದ ಈ ಸೇವೆಗೆ ನಾವೆಲ್ಲರೂ ಜೊತೆಯಾಗೋಣ ಎಂದರು.
ರಮೇಶ ಬದ್ನೂರ್ ಮಾತನಾಡಿ ಕನ್ನಡ ಕಾರ್ಯಕ್ರಮದಲ್ಲಿ ಎಲ್ಲರೂ ಜೊತೆಯಾಗಿ ಕನ್ನಡ ಕಟ್ಟುವ ಕಾಯಕದಲ್ಲಿ ನಾವೆಲ್ಲರೂ ಜೊತೆಯಾಗೋಣ ಎಂದರು.
ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಮ್. ರಮೇಶ ಕಮತಗಿ ಮಾತನಾಡಿ ಮೇಘಮೈತ್ರಿ ರಥಯಾತ್ರೆಯೂ ಬಾಗಲಕೋಟೆಯಿಂದ ಹೊರಟು ಶಿರೂರು ಮಾರ್ಗವಾಗಿ ಕಮತಗಿ, ಅಮೀನಗಡ, ಹುನಗುಂದ, ಇಳಕಲ್, ಗುಡುರು, ಐಹೋಳೆ, ಪಟ್ಟದಕಲ್ಲು, ಗುಳೇದಗುಡ್ಡ, ಕೆರೂರು ಮಾರ್ಗವಾಗಿ ಬಾದಾಮಿ ತಲುಪಲಿದೆ ಆದ್ದರಿಂದ ಎಲ್ಲರೂ ಈ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಅಶೋಕ ಕಂದಗಲ್, ಉಮೇಶ ತಿಮ್ಮಾಪುರ, ರಮೇಶ ಹೂಗಾರ, ಎಸ್. ಜಿ. ತೇಲಿ, ಪರಶುರಾಮ ನಾಲವದೇ,ಕುಮಾರ ಕನಕೇರಿ,ಗಣೇಶ ಹಣಗಿ,ರಾಜೇಶ್ ಗುಳಬಾಳ ಹಾಗೂ ಸಕ್ರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ